ಐಪಿಎಲ್ ರದ್ದಾದ್ರೆ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯವೇನು?

1
513

ಮಹೇಂದ್ರ ಸಿಂಗ್ ಧೋನಿ, ವಿಶ್ವಕ್ರಿಕೆಟ್ ಕಂಡ ಅದ್ಭುತ ಬ್ಯಾಟ್ಸ್ಮನ್, ಫಿನಿಶರ್, ವಿಕೆಟ್ ಕೀಪರ್, ಕ್ಯಾಪ್ಟನ್. ಆದರೆ, 2019ರಲ್ಲಿ ಇಂಗ್ಲೆಂಡಲ್ಲಿ ನಡೆದ ಏಕದಿನ ವಿಶ್ವಕಪ್ ಬಳಿಕ ಧೋನಿ ಟೀಮ್ ಇಂಡಿಯಾದ ಕಾಣಿಸಿಕೊಂಡಿಲ್ಲ. ಯಾವುದೇ ಸರಣಿಗೂ ಧೋನಿಯನ್ನು ಆಯ್ಕೆ ಮಾಡಲಾಗುತ್ತಿಲ್ಲ.

ಆಯ್ಕೆಗಾರರು ಧೋನಿಯನ್ನು ಕಡೆಗಾಣಿಸುತ್ತಿದ್ದಾರೆ ಅನ್ನೋ ಮಾತಿಗಿಂತ ಬಲವಾಗಿ ಕೇಳಿಬರುತ್ತಿರುವುದು ಅವರೇ ಸ್ವಯಂ ಪ್ರೇರಿತರಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ ಅಂತ!

ಅದೇನೇ ಇದ್ದರೂ ಐಪಿಎಲ್ 2020 ಬಳಿಕ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯ ನಿರ್ಧಾರವಾಗಲಿದೆ ಎಂದು ಹೇಳಲಾಗಿತ್ತು. ಧೋನಿ ಪ್ರದರ್ಶನದ ಆಧಾರದ ಮೇಲೆ ಮತ್ತೆ ಟೀಮ್ ಇಂಡಿಯಾ ಕದತಟ್ಟುತ್ತಾರೆ ಎಂದೇ ಹೇಳಲಾಗಿತ್ತು. ಧೋನಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಐಪಿಎಲ್ ವೇದಿಕೆಯೂ ಆಗಿತ್ತು. ಆದರೆ, ಕೊರೋನಾ ಆತಂಕದ ಹಿನ್ನೆಲೆಯಲ್ಲಿ ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಟೂರ್ನಿ ಏಪ್ರಿಲ್ 15ರವರೆಗೆ ಮುಂದೂಡಲ್ಪಟ್ಟಿದೆ. ಕೊರೋನಾ ನಿಯಂತ್ರಣಕ್ಕೆ ಬರದಿದ್ದರೆ, ಐಪಿಎಲ್ ರದ್ದಾಗುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಧೋನಿ ಭವಿಷ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ.

ಈ ಬಗ್ಗೆ ಕಾಮೆಂಟೆಟರ್ ಆಕಾಶ್ ಚೋಪ್ರ ಧೋನಿ ಕ್ರಿಕೆಟರ್ ಕರಿಯರ್ ಬಗ್ಗೆ ಪಾಸಿಟಿವ್ ಮಾತುಗಳನ್ನಾಡಿದ್ದಾರೆ. ಐಪಿಎಲ್ ನಡೆಯುತ್ತದೆಯೋ ಇಲ್ಲವೋ ಅದು ಧೋನಿಯ ಅಂತಾರಾಷ್ಟ್ರೀಯ ಭವಿಷ್ಯದ ಮೇಲೆ ಅದು ಯಾವುದೇ ಪರಿಣಾಮ ಬೀರುವುದಿಲ್ಲ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪಾಲ್ಗೊಳ್ಳಬೇಕೆಂದು ನಿರ್ಧಾರವನ್ನು ಮಾಡಬೇಕಷ್ಟೆ. ಆಯ್ಕೆಗಾರರು ಧೋನಿಯನ್ನು ಆಯ್ಕೆ ಮಾಡಲು ಬಯಸಿದರೆ ಧೋನಿ ಅವರು ಖಂಡಿತಾ ಆಯ್ಕೆಯಾಗುತ್ತಾರೆ ಎಂದಿದ್ದಾರೆ.


ಧೋನಿ ಅತ್ಯಂತ ಅನುಭವಿ ಆಟಗಾರ. ತಂಡಕ್ಕೆ ಅವರ ಅವಶ್ಯಕತೆಯಿದ್ದರೆ ಐಪಿಎಲ್ ಇದ್ದರೂ ಇಲ್ಲದಿದ್ದರೂ ಧೋನಿ ಆಡುತ್ತಾರೆ.
ಧೋನಿಗೆ ತಾನು ಏನು ಮಾಡಬೇಕೆಂದು ಚೆನ್ನಾಗಿ ತಿಳಿದಿದೆ. ಮತ್ತೆ ಟೀಮ್ ಇಂಡಿಯಾಗೆ ವಾಪಸಾಗಬೇಕಿದ್ದರೆ ತಮ್ಮ ಲಭ್ಯತೆಯನ್ನು ಆಯ್ಕೆಮಂಡಳಿಯ ಮುಂದೆ ತಿಳಿಸುತ್ತಾರೆ ಎಂದು ಚೋಪ್ರಾ ತಮ್ಮ ಯೂಟ್ಯೂಬ್ ವಿಡಿಯೋ ಮೂಲಕ ತಿಳಿಸಿದ್ದಾರೆ.

1 COMMENT

LEAVE A REPLY

Please enter your comment!
Please enter your name here