ಇತಿಹಾಸದಲ್ಲಿ ಇಂತಹ ಕ್ರೂರ ಹೆಣ್ಣು ಎಲ್ಲೂ ಇಲ್ಲ..!

0
917

ಆಕೆಯ ಹೆಸರು ಮೇರಿ ಆ್ಯನ್ ಕಾಟನ್ ಅಂತ. ಇಂಗ್ಲೆಂಡ್ ನ ಲೋ ಮೂರ್ಸ್ಲಿ ಎಂಬಲ್ಲಿ ಹುಟ್ಟಿದ್ಲು. ಆಕೆ ಚಿಕ್ಕಂದಿನಿಂದ ಚೆನ್ನಾಗಿಯೇ ಇದ್ಲು. ಇತರ ಮಕ್ಕಳ ಜೊತೆ ಆಟವಾಡುತ್ತಾ ಬೆಳೆದಿದ್ದ ಒಳ್ಳೆಯ ಹುಡುಗಿ ಎಂದುಕೊಂಡಿದ್ದರು ಸುತ್ತಮುತ್ತಲಿನ ಜನ. ಅಲ್ಲದೇ ಆಕೆಗೆ 42 ವರ್ಷವಾಗುವವರೆಗೂ ಎಲ್ಲರಲ್ಲೂ ಅದೇ ಭಾವನೆ ಇತ್ತು. ವಿಶೇಷವೆಂದರೆ ಬ್ರಿಟನ್ ಸರ್ಕಾರವೂ ಆಕೆಯನ್ನು ನಂಬಿತ್ತು. ಆದರೆ ಆಕೆಯ ಮುಖವಾಡವೇ ಬೇರೆ ಇತ್ತು. ಆದ್ದರಿಂದ ಆಂಗ್ಲರು ಮೇರಿಯನ್ನು ಸೂರ್ಯ ಚಂದ್ರರಿರುವವರೆಗೂ ಮರೆಯುವುದಿಲ್ಲ. ಇಷ್ಟಕ್ಕೂ ಮೇರಿ ಏನು ಮಾಡಿದಳು ಅಂತೀರಾ ಈ ಸ್ಟೋರಿ ನೀವು ಓದಲೇಬೇಕು.


ಮೇರಿ ಆ್ಯನ್ ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ವಿಲಿಯಂ ಮೋವ್ ಬ್ರೇ ಎಂಬಾತತನ್ನು ವರಿಸಿದರಳು. ಕುಟುಂಬ ತುಂಬಾ ಚೆನ್ನಾಗಿಯೇ ಸಾಗುತ್ತಿತ್ತು. ಪತಿ ಪತ್ನಿ ಮಧ್ಯೆ ಅನ್ಯೋನ್ಯತೆ ಇತ್ತು. ಅದಕ್ಕೆ ಸಾಕ್ಷಿ ಎಂಬಂತೆ ಐದು ಜನ ಮಕ್ಕಳು ಹುಟ್ಟಿದ್ದವು. ಆದರೆ ದುರಾದೃಷ್ಟ ಎಂಬುದು ಮೇರಿ ಮತ್ತು ವಿಲಿಯಂ ಕುಟುಂಬಕ್ಕೆ ಅಂಟಿಕೊಂಡಿತ್ತು. ಐದು ಮಕ್ಕಳ ಪೈಕಿ ನಾಲ್ಕು ಮಕ್ಕಳು ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ನೋವನ್ನು ತಾಳದೇ ಸಾವನ್ನಪ್ಪಿದವು. ಇದು ಮೇರಿ ಮತ್ತು ವಿಲಿಯಂಗೆ ತೀವ್ರವಾಗಿ ಕಾಡತೊಡಗಿತು. ಆದ್ದರಿಂದ ಕುಟುಂಬವನ್ನು ಬೇರೆಡೆ ಸ್ಥಳಾಂತರಿಸಲಾಯಿತು. ಅಲ್ಲೂ ಅದೇ ಸಮಸ್ಯೆ ಎದುರಾಗಿತ್ತು. ಮತ್ತೇ ಹುಟ್ಟಿದ ಮೂರೂ ಮಕ್ಕಳು ಅದೇ ರೀತಿಯ ಸಮಸ್ಯೆಯಿಂದ ಸಾವನ್ನಪ್ಪಿದ್ದವು. ಇದೆಲ್ಲವನ್ನು ಗಮನಿಸಿದ ವಿಲಿಯಂ, ಮೇರಿಯನ್ನು ತ್ಯಜಿಸಿದ್ದ. ಆಗ ಮೇರಿ ಮತ್ತೋರ್ವನನ್ನು ವರಿಸಿದಳು. ಅವನ ಹೆಸರು ಜಾರ್ಜ್ ವಾರ್ಡ್ ಅಂತ.
ಎರಡನೇ ಮದುವೆಯನ್ನು ಮಾಡಿಕೊಂಡರೂ ಮೇರಿಗೆ ಸಮಸ್ಯೆ ಬೆನ್ನು ಬಿಡಲಿಲ್ಲ. ಬದಲಿಗೆ ಮತ್ತೆ ಹುಟ್ಟಿದ ಎರಡೂ ಮಕ್ಕಳು ಸಾವನ್ನಪ್ಪಿದ್ದವು. ನೋಡ ನೋಡುತ್ತಿದ್ದಂತೆ ಜಾರ್ಜ್ ವಾರ್ಡ್ ಕೂಡಾ ಸಾವಿನ ಮನೆ ಸೇರಿದ. ಇದನ್ನು ಗಮನಿಸಿದ ಇಂಗ್ಲೆಂಡ್ ಸರ್ಕಾರ ಮೇರಿ ಜೀವನಕ್ಕೆಂದು ಸುಮಾರು 35 ಪೌಂಡ್ ಹಣವನ್ನು ನೀಡಿತು. ಆದರೆ ಇಂಗ್ಲೆಂಡ್ ನ ಪತ್ರಿಕೆಗಳು ಮಾತ್ರ ಮೇರಿಯ ಕುಟುಂಬದಲ್ಲಿನ ಸಾವುಗಳನ್ನು ಕೊಲೆಗಳು ಎಂದು ಜರಿದವು. ಮೇರಿಗೆ ಶಿಕ್ಷೆ ವಿಧಿಸಬೇಕು ಎಂದು ಷರಾ ಬರೆದವು. ಆದರೆ ಪತ್ರಿಕೆಗಳ ಮಾತು ಸರ್ಕಾರದ ಕಿವಿಗೆ ಬೀಳಲೇ ಇಲ್ಲ.
ಆದರೆ ಪತ್ರಿಕೆಗಳ ಮಾತು ನಿಜವೇ ಆಗಿತ್ತು. ಏಕೆಂದರೆ ಮೇರಿ ಆ್ಯನ್ ಎಂಬ ಕ್ರೂರಿ, ತನ್ನ ಒಂದು ಡಜನ್ ಮಕ್ಕಳು, ಇಬ್ಬರು ಪತಿಗಳು, ಒಬ್ಬ ಪ್ರಿಯತಮನನ್ನು ಮೇರಿ ಕೊಂದು ಮುಗಿಸಿದ್ದಳು. ಇಷ್ಟಕ್ಕೂ ಅವರನ್ನು ಕೊಲೆ ಮಾಡಲು `ಆರ್ಸಿನಿಕ್’ ಎಂಬ ಕಠೋರ ವಿಷವನ್ನು ಊಟದಲ್ಲಿ ಅಲ್ಪ ಪ್ರಮಾಣದಲ್ಲಿ ಹಾಕಿ ನೀಡುತ್ತಿದ್ದಳು. ಅದು ಯಾವುದೇ ವ್ಯಕ್ತಿಯನ್ನು ನಿಧಾನಕ್ಕೆ ಸಾಯುವಂತೆ ಮಾಡುತ್ತಿತ್ತು. ಅವರೆಲ್ಲರೂ ಸಾಯುವುದನ್ನು ನೋಡಿ ಮೇರಿ ಆ್ಯನ್ ಖುಷಿಪಡುತ್ತಿದ್ದಳು.!
ಇಷ್ಟಕ್ಕೂ ಮೇರಿ ಆ್ಯನ್ ಎಂಬ ಕ್ರೂರ ಮಹಿಳೆಯ ಸಾವು ಕೂಡಾ ಅತ್ಯಂತ ಕಠೋರವಾಗಿತ್ತು. ಏಕೆಂದರೆ ಮೇರಿ ಆ್ಯನ್ ನರಳುತ್ತಾ ನರಳುತ್ತಾ ಸಾವನ್ನಪ್ಪಿದಳು. ತನ್ನ ಮಕ್ಕಳನ್ನೇ ಕೊಂದು ಶಾಪಕ್ಕೆ ತುತ್ತಾಗಿದ್ದ ಈಕೆಯ ಅಸಲಿಯತ್ತನ್ನು ತಿಳಿದ ಅಲ್ಲಿನ ಸರ್ಕಾರ ಮಾರ್ಚ್ 24 1873ರಲ್ಲಿ ಮೇರಿಗೆ ಮರಣದಂಡನೆ ವಿಧಿಸಿತು. ತನ್ನವರನ್ನೇ ಕೊಲೆಗೈದ ಪಾಪಕ್ಕೆ ಆಕೆ ನರಳಿ ನರಳಿ ಸಾಯುವಂತೆ ಮಾಡಿತು.

 

LEAVE A REPLY

Please enter your comment!
Please enter your name here