ಐಪಿಎಲ್ 2021 : ಹೆಚ್ಚು ನೋಬಾಲ್ ಹಾಕಿದವರಾರು ಗೊತ್ತೇ?

0
86

ಏಪ್ರಿಲ್ 9ರಂದು ಭಾರತದಲ್ಲಿ ಆರಂಭವಾದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮೇ 4ರವರೆಗೂ ಯಾವುದೇ ಅಡಚಣೆಯಿಲ್ಲದೆ ಯಶಸ್ವಿಯಾಗಿಯೇ ನಡೆದುಕೊಂಡುಬಂದಿತ್ತು. ತದನಂತರ ಐಪಿಎಲ್ ಬಯೋ-ಬಬಲ್ ಒಳಗೂ ಕೊರೊನಾ ಪ್ರವೇಶಿಸಿ ಕೆಲ ಆಟಗಾರರಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ. ಪ್ರಸ್ತುತ ಐಪಿಎಲ್ ಟೂರ್ನಿಯ 29 ಪಂದ್ಯಗಳು ಈಗಾಗಲೇ ಮುಗಿದಿದ್ದು ಉಳಿದ ಪಂದ್ಯಗಳನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಮುಂದುವರೆಸುವುದಕ್ಕೆ ಬಿಸಿಸಿಐ ಚಿಂತನೆ ನಡೆಸಿದೆ.

 

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 29 ಪಂದ್ಯಗಳು ಯಶಸ್ವಿಯಾಗಿ ಮುಗಿದಿದ್ದು ಇವುಗಳಲ್ಲಿ ಅನ್‌ಕ್ಯಾಪ್ಡ್ ಬೌಲರ್‌ಗಳು ಉತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಮಿಂಚಿದರು. ಒಂದೆಡೆ ಅನ್‌ಕ್ಯಾಪ್ಡ್ ಬೌಲರ್‌ಗಳು ಉತ್ತಮ ಪ್ರದರ್ಶನವನ್ನು ನೀಡಿದರೆ ಮತ್ತೊಂದೆಡೆ ಅಂತಾರಾಷ್ಟ್ರೀಯ ಸ್ಟಾರ್ ಬೌಲರ್‌ಗಳು ಕಳಪೆ ಪ್ರದರ್ಶನ ನೀಡುವುದರ ಮೂಲಕ ಮಂಕಾದರು. ಅದರಲ್ಲಿಯೂ ಕಳೆದ ಐಪಿಎಲ್ ಆವೃತ್ತಿಗಳಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದ ಜಸ್ಪ್ರೀತ್ ಬುಮ್ರಾ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಕ್ಷರಶಃ ಕಳಪೆ ಪ್ರದರ್ಶನವನ್ನು ನೀಡಿದರು ಎಂದರೆ ತಪ್ಪಾಗಲಾರದು.

 

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿರುವ ಜಸ್ಪ್ರೀತ್ ಬುಮ್ರಾ ಪಡೆದದ್ದು ಕೇವಲ 6 ವಿಕೆಟ್‍ಗಳು. ಅದರಲ್ಲಿಯೂ ಪಂದ್ಯವೊಂದರಲ್ಲಿ 4 ಓವರ್‌ ಮಾಡಿದ ಬುಮ್ರಾ ಬರೋಬ್ಬರಿ 56 ರನ್ ನೀಡುವುದರ ಮೂಲಕ ಅವರ ಐಪಿಎಲ್ ಇತಿಹಾಸದಲ್ಲಿಯೇ ಅತಿಕೆಟ್ಟ ಪ್ರದರ್ಶನವನ್ನು ನೀಡಿದರು. ಇಷ್ಟು ಮಾತ್ರವಲ್ಲದೆ ಬುಮ್ರಾ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ನೋಬಾಲ್ ಎಸೆದ ಬೌಲರ್ ಎನಿಸಿಕೊಂಡಿದ್ದಾರೆ. ಟೂರ್ನಿಯಲ್ಲಿ ಇದುವರೆಗೂ 7 ಪಂದ್ಯಗಳನ್ನಾಡಿರುವ ಬುಮ್ರಾ 4 ನೋಬಾಲ್ ಎಸೆದಿದ್ದಾರೆ. ಬುಮ್ರಾ ಹೊರತುಪಡಿಸಿದಂತೆ ಹರ್ಷಲ್ ಪಟೇಲ್ ಮತ್ತು ಪ್ರಸಿದ್ಧ್ ಕೃಷ್ಣ ಕೂಡ ತಲಾ 4 ನೋಬಾಲ್‌ಗಳನ್ನು ಪ್ರಸ್ತುತ ಟೂರ್ನಿಯಲ್ಲಿ ಎಸೆದಿದ್ದಾರೆ. ಉಳಿದಂತೆ ಮೊಹಮ್ಮದ್ ಶಮಿ, ಮುಸ್ತಫಿಜರ್ ರಹಮಾನ್, ಚೇತನ್ ಸಕಾರಿಯಾ, ರವೀಂದ್ರ ಜಡೇಜಾ ಹಾಗೂ ಸುನೀಲ್ ನರೇನ್ ತಲಾ 2 ನೋಬಾಲ್‌ಗಳನ್ನು ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಎಸೆದಿದ್ದಾರೆ.

 

LEAVE A REPLY

Please enter your comment!
Please enter your name here