ಬಿಗ್‌ಬಾಸ್ ರದ್ದು..!? ಇಲ್ಲಿದೆ ಕಾರಣ

1
282

ಕರ್ನಾಟಕದಾದ್ಯಂತ ಕೊರೋನಾವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇದ್ದು ಆಕ್ಸಿಜನ್ ಸಮಸ್ಯೆ ಉಂಟಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಕೂಡ ದೊಡ್ಡದಾಗುತ್ತಿದೆ.

 

 

ಕೊರೋನಾವೈರಸ್ ಹಾವಳಿ ಹೆಚ್ಚಾದ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ರದ್ದು ಮಾಡಲಾಗಿದೆ. ಇದೀಗ ಐಪಿಎಲ್ ಬೆನ್ನಲ್ಲೇ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮವನ್ನು ಸಹ ರದ್ದು ಮಾಡುವಂತೆ ಕೂಗು ಕೇಳಿಬಂದಿದೆ. ರಾಜ್ಯದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಲಾಕ್ ಡೌನ್ ನಡೆಯುತ್ತಿದೆ. ಸರ್ಕಾರದ ನಿಯಮಗಳ ಪ್ರಕಾರ ಯಾವುದೇ ರೀತಿಯ ಶೂಟಿಂಗ್ ಗಳನ್ನು ನಡೆಸಬಾರದು ಆದರೆ ಬಿಗ್ ಬಾಸ್ ಕಾರ್ಯಕ್ರಮವನ್ನು ಮಾತ್ರ ಯಾವುದೇ ಅಡೆತಡೆ ಇಲ್ಲದೆ ಶೂಟಿಂಗ್ ಮಾಡಲಾಗುತ್ತಿದೆ.

 

 

 

ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ದನಿ ಎತ್ತಿರುವ ಸಾಮಾಜಿಕ ಕಾರ್ಯಕರ್ತ ಕೆ ಆರ್ ವೆಂಕಟೇಶ್ ಗೌಡ ಅವರು ಕೂಡಲೆ ಬಿಗ್ ಬಾಸ್ ಕಾರ್ಯಕ್ರಮವನ್ನು ನಿಲ್ಲಿಸಿ ಸ್ಪರ್ಧಿಗಳನ್ನು ಮತ್ತು ಸಿಬ್ಬಂದಿ ವರ್ಗದವರನ್ನು ಕೋವಿಡ್ ಟೆಸ್ಟ್ ಮಾಡಿಸಿ ತದನಂತರ ಅವರವರ ಮನೆಗಳಿಗೆ ಕಳುಹಿಸಬೇಕು ಎಂದು ಹೇಳಿದ್ದಾರೆ. ಎಲ್ಲರೂ ನಿಯಮವನ್ನು ಪಾಲಿಸುತ್ತಿರುವಾಗ ಬಿಗ್ ಬಾಸ್ ಕಾರ್ಯಕ್ರಮಕ್ಕೆ ವಿಶೇಷವಾದ ನಿಯಮವನ್ನೇನೂ ಸರ್ಕಾರ ನೀಡಿಲ್ಲ ಹೀಗಾಗಿ ಎಲ್ಲರೂ ಪಾಲಿಸುತ್ತಿರುವಂತೆ ಬಿಗ್ ಬಾಸ್ ಕಾರ್ಯಕ್ರಮದವರು ಕೂಡ ಸರ್ಕಾರದ ನಿಯಮವನ್ನು ಪಾಲಿಸಿ ಶೂಟಿಂಗ್ ಅನ್ನು ನಿಲ್ಲಿಸಬೇಕು ಎಂದು ಕೆ ಆರ್ ವೆಂಕಟೇಶ್ ಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.

 

 

ಕಳೆದೆರಡು ವಾರಗಳಿಂದ ಕಿಚ್ಚ ಸುದೀಪ ಅವರು ಸಹ ಅನಾರೋಗ್ಯದ ಕಾರಣ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡಲು ಬಂದಿಲ್ಲ. ಪರಿಸ್ಥಿತಿ ಮನರಂಜನೆಯನ್ನೂ ಪಡೆದುಕೊಳ್ಳುವ ರೀತಿ ಇಲ್ಲ, ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಲು ಇದು ಸರಿಯಾದ ಸಮಯವಲ್ಲ ಹೀಗಾಗಿ ಕೂಡಲೇ ಕಾರ್ಯಕ್ರಮವನ್ನು ಸ್ಥಗಿತಗೊಳಿಸಬೇಕು ಎಂದು ವೆಂಕಟೇಶ್ ಗೌಡ ಹೇಳಿದ್ದಾರೆ.

1 COMMENT

LEAVE A REPLY

Please enter your comment!
Please enter your name here