‘ಐ ಲವ್​ ಯು’ ಎಂದು ತಪ್ಪು ಮಾಡಿದೆ ಅಂತ ಬಿಕ್ಕಿ ಬಿಕ್ಕಿ ಅಳ್ತಿದ್ದಾರೆ ರಚಿತಾ…! ಕಾರಣ ಪ್ರಿಯಾಂಕ ಅಲ್ಲ..!

Date:

ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾರಾಮ್ ನಟನೆಯ ‘ಐ ಲವ್​ ಯು’ ಸಿನಿಮಾ ರಿಲೀಸ್​ಗೆ ಮುಂಚೆ ಎಷ್ಟು ಸದ್ದು ಮಾಡಿತ್ತು. ಅದರ ಮೂರು ಪಟ್ಟು ಹೆಚ್ಚಿನ ಸೌಂಡ್ ಅನ್ನು ರಿಲೀಸ್ ಆದಲ್ಲಿಂದ ಮಾಡುತ್ತಿದೆ.
ಆರ್. ಚಂದ್ರು ನಿರ್ದೇಶನದ ಐ ಲವ್ ಯು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕನ್ನಡ ಮಾತ್ರವಲ್ಲದೆ ತೆಲುಗಲ್ಲೂ ಉಪ್ಪಿ, ರಚ್ಚು ‘ಐ ಲವ್ ಯು’ ಹೇಳಿದ್ದಾರೆ. ಎರಡೂ ಭಾಷೆಯಲ್ಲೂ ಸಿನಿಮಾ ಗೆಲುವಿನತ್ತ ದಾಪುಗಾಲು ಇಟ್ಟಿದೆ. ಎರಡೂ ಭಾಷೆಯ ಸಿನಿ ರಸಿಕರು ಒಪ್ಪಿಕೊಂಡಿದ್ದಾರೆ. ಇಡೀ ಚಿತ್ರತಂಡ ಯಶಸ್ಸಿನ ಖುಷಿಯಲ್ಲಿದೆ. ಆ ಸಕ್ಸಸ್ ಅನ್ನು ಸಂಭ್ರಮಿಸುತ್ತಿದೆ. ಆದರೆ, ನಾಯಕಿ ರಚಿತಾ ರಾಮ್​ ಮಾತ್ರ ಬಿಕ್ಕಿ ಬಿಕ್ಕಿ ಅಳ್ತಾ ಇದ್ದಾರೆ..!
ಈ ಸಿನಿಮಾದ ದೃಶ್ಯವೊಂದರಲ್ಲಿ ಉಪೇಂದ್ರ ಮತ್ತು ರಚಿತಾ ರಾಮ್ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ರಚಿತಾ ಅಂತು ಹಿಂದೆಂದೂ ಕಾಣದಷ್ಟು ಬೋಲ್ಡ್ ಆಗಿ ನಟಿಸಿ ಪಡ್ಡೆ ಹುಡುಗರ ನಿದ್ರೆ ಕದ್ದಿದ್ದಾರೆ..! ಆ ದೃಶ್ಯದ ಬಗ್ಗೆ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಬಹಿರಂಗವಾಗಿಯೇ ತಮ್ಮ ಅಸಮಧಾನ ಹೊರ ಹಾಕಿದ್ದಾರೆ. ಈ ಜಗಳವೇ ದೊಡ್ಡದಾಯ್ತಾ? ಇದೇ ಕಾರಣಕ್ಕೆ ರಚಿತಾ ಅಳ್ತ ಇದ್ದಾರಾ ಎಂದು ಕೇಳ್ಬೇಡಿ. ರಚಿತಾ ಅಳುವಿಗೆ ಪ್ರೀಯಾಂಕ ಕಾರಣ ಅಲ್ಲವೇ ಅಲ್ಲ. ಕಾರಣ ರಚಿತಾರ ತಂದೆಯೇ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ರಚಿತ ರಾಮ್, ಐ ಲವ್ ಯು ಸಿನಿಮಾದಲ್ಲಿ ನಾನು ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ನನ್ನ ತಂದೆಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಅವರಿಗೆ ನಾನು ಕ್ಷಮೆ ಕೇಳುವುದನ್ನು ಬಿಟ್ಟರೆ ಮತ್ತೇನು ಮಾಡಲು ಸಾಧ್ಯವಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಹೀಗೆ ರಚಿತಾ ತುಂಬಾ ಬೇಜಾರಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ

ರೌಡಿಗಳನ್ನು, ಗೂಂಡಾಗಳನ್ನು ಬಿಟ್ಟು ಜನರ ಆಸ್ತಿಗಳನ್ನು ಲಪಟಾಯಿಸುತ್ತಿದ್ದಾರೆ: ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರು: ರೌಡಿಗಳನ್ನು,...

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯ! ಎಲ್ಲಿ ನಡೆಯಲಿದೆ?

World Cup 2025: ಇಂದು ಭಾರತ- ಆಫ್ರಿಕಾ ನಡುವಿನ ವಿಶ್ವಕಪ್ ಫೈನಲ್...

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ ಎಚ್ಚರ!

ನಿಮ್ಮ ಮುಖಕ್ಕೆ ಬಳಸುವ ರೋಸ್​ ವಾಟರ್​ನಿಂದಲೂ ಇದೆ ಅಪಾಯ; ಬಳಸೋ ಮುನ್ನ...

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...