ಒಂದಲ್ಲ ಎರಡಲ್ಲ 700 ಬೀದಿನಾಯಿಗಳ ಆಶ್ರಯದಾತ!

Date:

ರಾಕೇಶ್ ಶುಕ್ಲಾ. ನಮ್ಮ ಬೆಂಗಳೂರಿನ ಹೊರವಲಯದಲ್ಲಿ ಬರೋಬ್ಬರಿ 735 ಬೀದಿ ನಾಯಿಗಳಿಗೆ ಆಶ್ರಯದಾತರಾಗಿದ್ದಾರೆ. ರಾಕೇಶ್ ಶುಕ್ಲಾ ಅವರು ಟೆಲಿಕಮ್ಯೂನಿಕೇಷನ್ ನಲ್ಲಿ ಎಂಜಿನಿಯರ್ . ಮೊದಲು ದೆಹಲಿಯಲ್ಲಿ ಕೆಲಸ ಮಾಡಿ, ಆಮೇಲೆ ಅಮೆರಿಕಾದಲ್ಲೂ ಕಾರ್ಯ ನಿರ್ವಹಿಸಿದ್ದರು. 10 ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ ರಾಕೇಶ್ ತನ್ನ ಪತ್ನಿಯ ಜೊತೆಗೂಡಿ ತನ್ನದೇ ಒಂದು ಸಾಫ್ಟ್ವೇರ್ ಕಂಪನಿಯನ್ನು ಆರಂಭಿಸಿದ್ರು.

46 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ರಾಕೇಶ್ ಶುಕ್ಲಾ ಅವರನ್ನು ಈಗ ಹಲವು “ ಬೀದಿನಾಯಿಗಳ ಪಾಲಿನ ಅಪ್ಪ” ಅಂತಲೇ ಕರೆಯುತ್ತಾರೆ. ರಾಕೇಶ್ ಪಾಲಿಗೆ ನಾಯಿಗಳು ಮಕ್ಕಳಾದ್ರೆ, ರಾಕೇಶ್ ಅವುಗಳಿಗೆ ದೇವರು. ರಾಕೇಶ್ ಮೊದಲಿಗೆ ಸಾಕಿದ್ದು 45 ದಿನದ ಗೋಲ್ಡನ್ ರಿಟ್ರೀವರ್ ತಳಿಯನ್ನು. ಅದಕ್ಕೆ ರಾಕೇಶ್ ಶುಕ್ಲಾ ಅವರು ಕಾವ್ಯ ಅನ್ನುವ ಹೆಸರಿಟ್ಟಿದ್ದರು.


ಇನ್ನು ರಾಕೇಶ್ ಶುಕ್ಲಾ ಅವರು ಮೊದಲು ನಾಯಿ ಮರಿಯನ್ನು ತಂದಾಗ ಅದು ಭಯದಿಂದ ಮನೆಯ ಯಾವುದೋ ಮೂಲೆಯಲ್ಲಿ ಅಡಗಿ ಕುಳಿತಿತ್ತಂತೆ. ಅದಕ್ಕೆ ಅವರು ಕಾವ್ಯ ಅನ್ನುವ ಹೆಸರಿಟ್ಟಂತೆ. ಅದೇ ಹೆಸರಿನಿಂದ ಸದಾ ಕರೆಯುತ್ತಿದ್ದು, ಅದಕ್ಕೆ ಅವರ ಪ್ರೀತಿ ಅದಕ್ಕೆ ಅರ್ಥವಾಗುತ್ತಿತ್ತು. ಅದನ್ನು ಮುಟ್ಟಿ ನೇವರಿಸಿದಾಗ ಆಗುತ್ತಿದ್ದ ಸಂತೋಷ ಅಷ್ಟಿಷ್ಟಲ್ಲ . ಅಲ್ಲಿಂದ ಕಾವ್ಯ ರಾಕೇಶ್ ಮನಸ್ಸನ್ನೇ ಬದಲಾಯಿಸಿತು. ರಾಕೇಶ್ ಬೀದಿನಾಯಿಗಳನ್ನು ಸಾಕಲು ಶುರು ಮಾಡಿಕೊಂಡರು.
ಮನೆಯಲ್ಲಿ ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಲು ಆರಂಭಿಸಿತು. ಆರಂಭದಲ್ಲಿ ಹೆಂಡತಿಯಿಂದ ರಾಕೇಶ್ ವಿರೋಧವನ್ನು ಕೂಡ ಅನುಭವಿಸಿದ್ದರು. ಆದ್ರೆ ಸಮಯ ಕಳೆದಂತೆ ಎಲ್ಲವೂ ಬದಲಾಯಿತು. ನಾಯಿಗಳ ಸಂಖ್ಯೆ ಹೆಚ್ಚಾದಂತೆ ಬೆಂಗಳೂರಿನ ಹೊರವಲಯದ ದೊಡ್ಡ ಬಳ್ಳಾಪುರದಲ್ಲಿ ಜಾಗ ಖರೀದಿ ಮಾಡಿ ಅವುಗಳಿಗೆ ವಸತಿ ಕಲ್ಪಿಸಿಕೊಟ್ಟರು.


ನಾಯಿಗಳು ಇರುವ ಈ ಜಾಗದಲ್ಲಿ ಎಲ್ಲವೂ ಇದೆ. ನಾಯಿಗಳು ಈಜಬೇಕು ಅಂದಾಗ ಈಜಲು ವ್ಯವಸ್ಥೆ ಇದೆ. ನಾಯಿಗಳನ್ನು ನೋಡೋದಿಕ್ಕಾಗಿಯೇ ಸುಮಾರು 10 ಎಂಪ್ಲಾಯಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಆರಂಭದಲ್ಲಿ ರಾಕೇಶ್ ಬೀದಿ ನಾಯಿಗಳಿಗೆ ಆಫೀಸ್ನಲ್ಲೇ ವಸತಿ ಒದಗಿಸಿದ್ದರು. ಈಗ 5 ನಾಯಿಗಳು ರಾಕೇಶ್ ಮನೆಯಲ್ಲಿದ್ದರೆ, 10 ನಾಯಿಗಳು ಆಫೀಸ್ನಲ್ಲಿವೆ. ಬೆಂಗಳೂರಿನ ಹೊರವಲಯದಲ್ಲಿ ಹಲವು ನಾಯಿಗಳು ಇವೆ.
ನಾಯಿಗಳಿಗಾಗಿಯೇ ರಾಕೇಶ್ ಪ್ರತಿದಿನ ಸುಮಾರು 50 ಸಾವಿರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಈ ಪೈಕಿ ಶೇಕಡಾ 93ರಷ್ಟು ಹಣ ರಾಕೇಶ್ ಸ್ವತಃ ಕೈಯಿಂದಲೇ ಖರ್ಚು ಮಾಡುತ್ತಿದ್ದಾರೆ. ಅಂದಹಾಗೇ ರಾಕೇಶ್ ನಾಯಿ ಪಾರ್ಕ್ ಬಗ್ಗೆ ಸ್ಥಳೀಯರಿಂದ ಹಲವು ವಿರೋಧಗಳನ್ನೂ ಎದುರಿಸಿದ್ದಾರೆ. ಆದ್ರೆ ಇಲ್ಲಿ ತನಕ ನಾಯಿಗಳ ಮೇಲಿರುವ ಪ್ರೀತಿ ಅವರಿಗೆ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಲ್ಲಲು ಸಹಾಯ ಮಾಡಿದೆ.
ಬೆಂಗಳೂರಿನ ಬ್ಯೂಸಿ ಜೀವನದ ನಡುವೆ ತನ್ನ ಕಾರ್ಯವನ್ನೇ ಮರೆತ ಹಲವರ ಮಧ್ಯೆ ಬೀದಿನಾಯಿಗಳ ಪಾಲಿನ ದೇವರು ರಾಕೇಶ್ ವಿಭಿನ್ನವಾಗಿ ಕಾಣುತ್ತಾರೆ.

Share post:

Subscribe

spot_imgspot_img

Popular

More like this
Related

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್ ತಿರಗೇಟು

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್...

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...