ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ನಟರ ಸಿನಿಮಾಗಳ ಹಬ್ಬ ಶುರುವಾಗಿದೆ. ಒಂದಾದ ಮೇಲೊಂದರಂತೆ ಸ್ಟಾರ್ ನಟರ ಬಹು ನಿರೀಕ್ಷಿತ ಸಿನಿಮಾಗಳು ತೆರೆಗೆ ಬರುತ್ತಿವೆ.
ಪ್ರಮುಖವಾಗಿ ಕುರುಕ್ಷೇತ್ರ ಸಿನಿಮಾ ರಿಲೀಸ್ಗೆ ದಿನಗಣನೆ ಆರಂಭವಾಗಿದೆ. ಮುನಿರತ್ನ ನಿರ್ಮಾಣದ, ನಾಗಣ್ಣ ನಿರ್ದೇಶನದ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ, ಶಶಿಕುಮಾರ್, ರವಿಶಂಕರ್. ನಿಖಿಲ್ ಕುಮಾರಸ್ವಾಮಿ ಮೊದಲಾದವರನ್ನು ಒಳಗೊಂಡ ದೊಡ್ಡ ತಾರಾಗಣವಿದೆ.
ಸೆಟ್ಟೇರಿದ್ದಲ್ಲಿಂದಲೂ ಸದ್ದು ಮಾಡುತ್ತಿರುವ ಕುರುಕ್ಷೇತ್ರದ ರಿಲೀಸ್ಗೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 9ಕ್ಕೆ ಎಂದು ಮೊದಲು ಹೇಳಲಾಗಿತ್ತು. ನಂತರ ಆಗಸ್ಟ್ 2ಕ್ಕೆ ಅಂತ ಅನೌನ್ಸ್ ಮಾಡಲಾಗಿತ್ತು. ಬಳಿಕ ಆಗಸ್ಟ್ 9ಕ್ಕೇ ಎಂದು ನಿಗಧಿಪಡಿಸಲಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಆಗಸ್ಟ್ 9ಕ್ಕೆ ಕುರುಕ್ಷೇತ್ರ ಮತ್ತು ಸುದೀಪ್ ಅಭಿನಯದ ಪೈಲ್ವಾನ್ ಕೂಡ ರಿಲೀಸ್ ಆಗುತ್ತದೆ ಎಂಬ ಮಾತಿತ್ತು. ಆದರೆ, ಕುರುಕ್ಷೇತ್ರ ಪ್ರೀಪೋನ್ ಮಾಡಲಾಗಿತ್ತು. ಪೈಲ್ವಾನ್ ಪೋಸ್ಟ್ಪೋನ್ ಆಗಿದ್ದು,. ಈಗ ಕುರುಕ್ಷೇತ್ರ ವರಮಹಾಲಕ್ಷ್ಮಿ ಹಬ್ಬಕ್ಕೆ, ಆಗಸ್ಟ್ 9ರಂದು ತೆರೆಗೆ ಬರ್ತಿದೆ.
ಆಗಸ್ಟ್ 2ಕ್ಕೆ ಕುರುಕ್ಷೇತ್ರ ಎಂದಾದಾಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಿಮಿಕ್ ಅನ್ನು ಆಗಸ್ಟ್ 9ಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. ಗಿಮಕ್ ಕೂಡ ಕುರುಕ್ಷೇತ್ರ ಡೈರೆಕ್ಟರ್ ನಾಗಣ್ಣ ಸಿನಿಮಾ..! ಆಗಸ್ಟ್ 9ಕ್ಕೇ ಗಿಮಿಕ್ ರಿಲೀಸ್ ಆದರೆ ಒಂದೇ ದಿನ ಒಬ್ಬ ಡೈರೆಕ್ಟರ್ರ ಎರಡು ಮೂವಿಗಳು ರಿಲೀಸ್ ಆಗುತ್ತದೆ.
ದರ್ಶನ್ ಮತ್ತು ಗಣೇಶ್ ಆತ್ಮೀಯ ಸ್ನೇಹಿತರಾಗಿದ್ದು, ಒಂದೇ ದಿನ ಥಿಯೇಟರ್ ನಲ್ಲಿ ಮುಖಾಮುಖಿ ಆಗಲ್ಲ ಅನ್ಸುತ್ತೆ. ಥಿಯೇಟರ್ ಸಮಸ್ಯೆ ಕೂಡ ಕಾಡಬಾರದು. ಆದ್ದರಿಂದ ಗಿಮಿಕ್ ಮುಂದೂಡುವ ಸಾಧ್ಯತೆ ಇದೆ..ಕಾದು ನೋಡಬೇಕು.. ಏನ್ ಏನಾಗುತ್ತದೆ ಎಂದು..!
ಒಂದು ದಿನ, ಒಬ್ಬ ಡೈರೆಕ್ಟರ್, 2 ಸಿನಿಮಾ..! ದರ್ಶನ್ ಜೊತೆ ಗಣೇಶ್ ಅಖಾಡಕ್ಕೆ?
Date: