ಉಪಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದ ಬಗ್ಗೆ ಜನರಲ್ಲಿ ಭಾರಿ ಕುತೂಹಲವಿತ್ತು ತಂದೆ ಬಿಜೆಪಿಯಲ್ಲಿದ್ದರೆ ಮಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಉಪಚುನಾವಣೆಯಲ್ಲಿ ಜಲಶಾಲಿಯಾದರು ಶರತ್ ಬಚ್ಚೇಗೌಡ ಅವರ ತಂದೆ ಬಿಜೆಪಿ ಸಂಸದರಾಗಿದ್ದರೂ ಸಹ ಬಚ್ಚೇಗೌಡ, ಪಕ್ಷದ ಅಧಿಕೃತ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಪ್ರಚಾರ ಕಾರ್ಯ ನಡೆಸಿರಲಿಲ್ಲ. ಅಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿದ್ದ ತಮ್ಮ ಪುತ್ರ ಶರತ್ ಬಚ್ಚೇಗೌಡರು ಪರವೂ ಪ್ರಚಾರ ಕಾರ್ಯದಲ್ಲಿ ಬಹಿರಂಗವಾಗಿ ಕಾಣಿಸಿರಲಿಲ್ಲ ಇದೀಗ ಅಪ್ಪ-ಮಗ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಬಚ್ಚೇಗೌಡ, ತಾವು ಚಿಕ್ಕಬಳ್ಳಾಪುರ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದರೆ ಪುತ್ರ ಶರತ್ ಬಚ್ಚೇಗೌಡ ಹೊಸಕೋಟೆ ಶಾಸಕರಾಗಿದ್ದಾರೆ ಇಂತಹ ಅಪರೂಪದ ತಂದೆ-ಮಗನ ಜೋಡಿ ನಮ್ಮದು ಎಂದು ಹೇಳಿಕೊಂಡಿದ್ದಾರಲ್ಲದೆ ಹೊಸಕೋಟೆಯ ಜನತೆ ಸ್ವಾಭಿಮಾನಕ್ಕೆ ಮನ್ನಣೆ ನೀಡಿದ್ದಾರೆ ಎನ್ನುವ ಮೂಲಕ ಪುತ್ರನ ಗೆಲುವಿಗೆ ಸಮರ್ಥನೆ ನೀಡಿದ್ದಾರೆ ಎಂದು ಹೇಳಲಾಗುತ್್ತ್ತಿದೆ.
ಒಂದೇ ವೇದಿಕೆಯಲ್ಲಿ ಅಪ್ಪಾ ಮಗ ! “ಅಪರೂಪದ ತಂದೆ-ಮಗನ ಜೋಡಿ ನಮ್ಮದು”
Date:






