ಒಟ್ಟಿಗೆ ಕಾಣಿಸಿಕೊಂಡ ‘ಮಲ್ಲ‘ ಜೋಡಿ.. ‘ಎಲ್ಲಿದ್ದೆ ಇಲ್ಲಿ ತನಕ‘..?
ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಹಿಟ್ ನೀಡಿದ ಸಿನಿಮಾ ಮಲ್ಲ.. ಈ ಚಿತ್ರದಲ್ಲಿ ರವಿಚಂದ್ರನ್ ಹಾಗೆ ಪ್ರಿಯಾಂಕ ಉಪೇಂದ್ರ ಅವರ ಆನ್ ಸ್ಕ್ರೀನ್ ಕೆಮಿಸ್ಟ್ರಿಗೆ ಸಿನಿ ರಸಿಕರು ಖುಷಿಯಾಗಿದ್ರು, ಶೃಂಗಾರವನ್ನ ಅಂದವಾಗಿ ತೋರಿಸಿ ಎಲ್ಲು ಹೆಚ್ಚೆನಿಸದೆ, ಕಡಿಮೆ ಆಗದೆ ರವಿಚಂದ್ರನ್ ಹಾಗೆ ಪ್ರಿಯಾಂಕ ಜೋಡಿ ಮಲ್ಲ ಸಿನಿಮಾದಲ್ಲಿ ಮೋಡಿ ಮಾಡಿತ್ತು.. ಈಗಲೂ ಈ ಚಿತ್ರದ ಗೀತೆ ಹಿಟ್ ಸ್ಥಾನದಲ್ಲಿದೆ..
ಹೀಗಿರುವ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ.. ಅಂದ್ರೆ ಮತ್ತೆ ಸಿನಿಮಾ ಮಾಡ್ತಿದ್ದಾರ ಅಂತ ಯೋಚಿಸಬೇಡಿ.. ಅದು ಸಿನಿಮಾವೊಂದರೆ ಮುಹೂರ್ತದಲ್ಲಿ.. ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ನಿರ್ಮಾಣ ಮಾಡಿ ನಾಯಕನಾಗಿ ನಟಿಸುತ್ತಿರುವ ‘ಎಲ್ಲಿದ್ದೆ ಇಲ್ಲಿ ತನಕ‘ ಚಿತ್ರದ ಮುಹೂರ್ತದಲ್ಲಿ.. ಈ ಚಿತ್ರಕ್ಕೆ ರವಿಮಾಮ ಕ್ಲಾಪ್ ಮಾಡಿದ್ರೆ, ಪ್ರಿಯಾಂಕ ಉಪೇಂದ್ರ ಸ್ಪೆಷಲ್ ಗೆಸ್ಟ್ ಆಗಿ ಆಗಮಿಸಿದ್ರು..