ಅಭಿನಯ ಚಕ್ರವರ್ತಿ, ಕಿಚ್ಚ, ಬಾದ್ ಷಾ ಎಂದೆಲ್ಲಾ ಕರೆಸಿಕೊಳ್ಳುವ ನಟ ಸುದೀಪ್. ಚಾಲೆಂಜಿಂಗ್ ಸ್ಟಾರ್, ದಾಸ, ಚಕ್ರವರ್ತಿ, ಡಿ ಬಾಸ್ ಅಂತೆಲ್ಲಾ ಕರೆಸಿಕೊಳ್ಳುವ ದರ್ಶನ್. ಅವರಿಬ್ಬರು ಕನ್ನಡ ಚಿತ್ರರಂಗದ ಕಣ್ಮನಿಗಳು. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಅಲಂಕರಿಸಿರುವ ಮಹಾನ್ ನಟರು.
ಒಂದು ಕಾಲದ ದೋಸ್ತಿಗಳು. ಕಾರಣಾಂತರದಿಂದ ದೂರ ಆಗಿದ್ದಾರೆ. ಈಗ ಅವರಿಬ್ಬರು ಒಟ್ಟಿಗೇ ಥಿಯೇಟರ್ಗಳಿಗೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ.
ದರ್ಶನ್ ಅಭಿನಯದ ಹಥ ಬಜೆಟ್ ಸಿನಿಮಾ ಕುರುಕ್ಷೇತ್ರ ಮತ್ತು ಸುದೀಪ್ ನಟನೆಯ ಪೈಲ್ವಾನ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುವುದು ಖಚಿತ ಎಂದು ಹೇಳಲಾಗುತ್ತಿದೆ. ಇದೇ 2019ರ ಆಗಸ್ಟ್ 9ರಂದು ಕುರುಕ್ಷೇತ್ರ ರಿಲೀಸ್ ಆಗುವುದು ಪಕ್ಕಾ ಆಗಿದೆ. ಕುರುಕ್ಷೇತ್ರ ಟೀಮ್ ಡೇಟ್ ಫಿಕ್ಸ್ ಮಾಡಿ ಅನೌನ್ಸ್ ಕೂಡ ಮಾಡಿ ಬಿಟ್ಟಿದೆ. ಇದೇ ದಿನ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ.
ದರ್ಶನ್ ಮತ್ತು ಸುದೀಪ್ ಅಭಿನಯದ ಸಿನಿಮಾಗಳು ಒಂದೇ ದಿನ ತೆರೆಗೆ ಅಪ್ಪಳಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಒಟ್ಟಿಗೆ ತೆರೆಕಂಡ ಉದಾಹರಣೆ ಇದೆ.
2006 ಫೆಬ್ರವರಿ 7ರಂದು ಸುದೀಪ್ ನಿರ್ದೇಶಿಸಿ ನಟಿಸಿದ್ದ ಮೈ ಆಟೋಗ್ರಾಫ್, ದರ್ಶನ್ ನಟನೆಯ ಸುಂಟರಗಾಳಿ ಸಿನಿಮಾ ಒಂದೇ ದಿನ ತೆರೆಕಂಡಿದ್ದವು.
ಅವರೆಡೂ ಸಿನಿಮಾಗಳು ಸೂಪರ್ ಹಿಟ್ ಆಗಿದ್ದು, ಯಶಸ್ವಿ ಪ್ರದರ್ಶನ ಕಂಡಿದ್ದವು.