ಒಮಿಕ್ರಾನ್ ಡೆಲ್ಟಾಗಿಂತ ಪರಿಣಾಮಕಾರಿನಾ, ಇಲ್ವಾ?

Date:

ಕೊರೊನಾ ವೈರಸ್​ನ ಹೊಸ ರೂಪಾಂತರಿಯಾದ ಓಮಿಕ್ರಾನ್​​ ಡೆಲ್ಟಾ ರೂಪಾಂತರಿಗಿಂತ ಮೂರು ಪಟ್ಟು ಹೆಚ್ಚಿನ ವೇಗದಲ್ಲಿ ಸೋಂಕನ್ನು ಹರಡುವ ಸಾಮರ್ಥ್ಯ ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್​ ಹೇಳಿದ್ದಾರೆ.

ಪ್ರಕರಣಗಳ ಹೆಚ್ಚಳ ಹಾಗೂ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯಲ್ಲಿ ಹೆಚ್ಚಳ ಈ ಎರಡರ ನಡುವೆ ವಿಳಂಬವಿದೆ ಎಂದು ಸ್ವಾಮಿನಾಥನ್​ ಹೇಳಿದರು.

ಸೋಂಕು ಹರಡಿದ ಎರಡು ಮೂರು ವಾರಗಳ ಬಳಿಕ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು ಇದರಿಂದಲೇ ನೀವು ರೋಗದ ತೀವ್ರತೆಯನ್ನು ಕಂಡುಹಿಡಿಯಬಹುದಾಗಿದೆ ಎಂದು ಹೇಳಿದ್ರು.

ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್​ ಕಾಲಿಟ್ಟಾಗಿನಿಂದ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಅಲ್ಲದೆ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಾಗಿ ಮಕ್ಕಳಿಗೆ ಈ ರೂಪಾಂತರಿಯಿಂದ ಸೋಂಕು ಬರುತ್ತಿದೆ ಎಂದು ಸೌಮ್ಯ ಸ್ವಾಮಿನಾಥನ್​ ಹೇಳಿದರು.

ಮಕ್ಕಳು ಹಾಗೂ ಲಸಿಕೆ ಹಾಕಿಸಿಕೊಳ್ಳದೇ ಇರುವವರೇ ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತಿದ್ದು ಈ ವಿಚಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕಿದೆ ಎಂದು ಹೇಳಿದ್ರು. ಈ ನಡುವೆ ಸಿಂಗಾಪುರದ ಆರೋಗ್ಯ ಸಚಿವಾಲಯವು ಜಾಗತಿಕವಾಗಿ ಆರಂಭಿಕ ಹಂತದಲ್ಲಿ ಮಾಡಲಾದ ವೈದ್ಯಕೀಯ ಅವಲೋಕನವು ಕೋವಿಡ್​ 19 ಓಮಿಕ್ರಾನ್​ ರೂಪಾಂತರವು ಹೆಚ್ಚಾಗಿ ಹರಡುತ್ತದೆ ಹಾಗೂ ಡೆಲ್ಟಾ ಹಾಗೂ ಬೀಟಾ ರೂಪಾಂತರಿಗಳಿಗೆ ಹೋಲಿಕೆ ಮಾಡಿದರೆ ಮರು ಸೋಂಕಿನ ಅಪಾಯವನ್ನು ಹೆಚ್ಚಾಗಿ ಹೊಂದಿದೆ ಎಂದು ಹೇಳಿದೆ.

ಅಂದರೆ ಇದರರ್ಥ ಕೋವಿಡ್​ 19ನಿಂದ ಚೇತರಿಸಿಕೊಂಡವರೂ ಸಹ ಒಮಿಕ್ರಾನ್​ ರೂಪಾಂತರದಿಂದ ಮರುಸೋಂಕಿಗೆ ಒಳಗಾಗುವ ಸಂಭಾವ್ಯತೆ ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

Share post:

Subscribe

spot_imgspot_img

Popular

More like this
Related

ಭ್ರಷ್ಟ-ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ನಿರ್ಧಾರ: ವಿಜಯೇಂದ್ರ

ಭ್ರಷ್ಟ-ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ನಿರ್ಧಾರ: ವಿಜಯೇಂದ್ರ ದಕ್ಷಿಣ ಕನ್ನಡ:...

ಮಧುಮೇಹದ ಮುನ್ನ ಬರುವ ಲಕ್ಷಣಗಳು: ನಿರ್ಲಕ್ಷ್ಯ ಮಾಡಿದರೆ ಅಪಾಯ ಗಂಭೀರ

ಮಧುಮೇಹದ ಮುನ್ನ ಬರುವ ಲಕ್ಷಣಗಳು: ನಿರ್ಲಕ್ಷ್ಯ ಮಾಡಿದರೆ ಅಪಾಯ ಗಂಭೀರ ಇತ್ತೀಚಿನ ದಿನಗಳಲ್ಲಿ...

ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್.!‌

‌ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್.!‌ ಬೆಂಗಳೂರು: ಸಿಲಿಕಾನ್‌...

ನೂತನ ಐಟಿ ನಗರಕ್ಕೆ ನಿರಂತರ ಹೂಡಿಕೆ, 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ: ಡಿ.ಕೆ. ಶಿವಕುಮಾರ್

ನೂತನ ಐಟಿ ನಗರಕ್ಕೆ ನಿರಂತರ ಹೂಡಿಕೆ, 60 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ:...