ನಟಿ ರಶ್ಮಿಕಾ ಮಂದಣ್ಣ ಬಹು ಕಡಿಮೆ ಅವಧಿಯಲ್ಲಿಯೇ ಸಿನಿಮಾ ರಂಗದಲ್ಲಿ ಹೊಸ ಎತ್ತರಗಳಿಗೆ ಏರಿದ್ದಾರೆ. ತೆಲುಗು, ತಮಿಳುಗಳಲ್ಲಿ ದೊಡ್ಡ ಸ್ಟಾರ್‌ಗಳೊಂದಿಗೆ ನಟಿಸಿರುವ ರಶ್ಮಿಕಾ, ಬಾಲಿವುಡ್‌ನಲ್ಲಿಯೂ ಅಮಿತಾಬ್ ಬಚ್ಚನ್ ಸಿನಿಮಾದಲ್ಲಿ ನಾಯಕಿ ಪಾತ್ರ ನಿರ್ಮಿಸಿದ್ದಾರೆ.
ರಶ್ಮಿಕಾರ ನಟನೆಯನ್ನು ಬಾಲಿವುಡ್ ಬಹುವಾಗಿ ಮೆಚ್ಚಿಕೊಂಡಿದ್ದು, ಸಿನಿಮಾಗಳು ಮಾತ್ರವೇ ಅಲ್ಲದೆ ಹಲವು ಜಾಹೀರಾತುಗಳ ಆಫರ್‌ಗಳು ಸಹ ರಶ್ಮಿಕಾ ಪಾಲಿಗೆ ಬರುತ್ತಿವೆ. ಕೆಲವು ಜಾಹೀರಾತುಗಳಲ್ಲಿ ಈಗಾಗಲೇ ನಟಿಸಿದ್ದಾರೆ ರಶ್ಮಿಕಾ ಮಂದಣ್ಣ ಆದರೆ ಇತ್ತೀಚೆಗೆ ರಶ್ಮಿಕಾ ನಟಿಸಿರುವ ಹೊಸ ಜಾಹಿರಾತು ಅವರ ಅಭಿಮಾನಿಗಳಿಗೆ ಹಾಗೂ ಕೆಲವು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ನಟಿ ರಶ್ಮಿಕಾ ಮಂದಣ್ಣ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನಲ್ಲಿ ರಶ್ಮಿಕಾರ ವರ್ತನೆ ಸಮಂಜಸವಾಗಿಲ್ಲ. ಇದು ಜಾಹೀರಾತು ಬರೆದವರ ತಪ್ಪಾದರೂ ರಶ್ಮಿಕಾ ಏಕೆ ಇಂಥಹಾ ಜಾಹೀರಾತುಗಳನ್ನು ಒಪ್ಪಿಕೊಳ್ಳಬೇಕು ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಮಾಚೊ ಬ್ರ್ಯಾಂಡ್‌ನ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ರಶ್ಮಿಕಾ ನಟಿಸಿದ್ದು, ರಶ್ಮಿಕಾ ಜೊತೆಗೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಸಹ ಕಾಣಿಸಿಕೊಂಡಿದ್ದಾರೆ. ಜಾಹೀರಾತಿನಲ್ಲಿ ರಶ್ಮಿಕಾ ಯೋಗ ಶಿಕ್ಷಕಿ ಆಗಿದ್ದು, ವಿಕ್ಕಿ ಕೌಶಲ್ ಯೋಗದ ಭಂಗಿಯೊಂದನ್ನು ಮಾಡುವಾಗ ಅವರು ತೊಟ್ಟಿರುವ ಒಳುಡುಪು ಕಾಣುತ್ತದೆ. ಕೂಡಲೇ ರಶ್ಮಿಕಾ ಆ ಒಳ ಉಡುಪನ್ನೇ ನೋಡುತ್ತಾ ನಿಂತು ಬಿಡುತ್ತಾರೆ. ಒಳ ಉಡುಪಿನ ಪ್ರಚಾರಕ್ಕಾಗಿ ಮಾಡಿರುವ ಈ ಜಾಹೀರಾತು ಸದಬಿರುಚಿಯಾಗಿಲ್ಲ ಎಂಬುದು ನೆಟ್ಟಿಗರ ವಾದ.
ಅದೇ ಬ್ರ್ಯಾಂಡ್‌ನ ಮತ್ತೊಂದು ಜಾಹೀರಾತಿನಲ್ಲಿ ವಿಕ್ಕಿ ಕೌಶನ್ ತಮ್ಮ ಯೋಗ ಮ್ಯಾಟ್ ತೆಗೆದುಕೊಳ್ಳಲು ಬರುತ್ತಾರೆ. ಆದರೆ ಅದನ್ನು ರಶ್ಮಿಕಾ ಮಂದಣ್ಣ ಮೇಲಿನ ಕಪಾಟಿನಲ್ಲಿಟ್ಟಿರುತ್ತಾರೆ. ಮೇಲಿನ ಕಪಾಟಿನಲ್ಲಿರುವ ಯೋಗ ಮ್ಯಾಟ್ ಅನ್ನು ವಿಕ್ಕಿ ತೆಗೆದುಕೊಳ್ಳಲು ಯತ್ನಿಸಿದಾಗ ಅವರು ತೊಟ್ಟಿರುವ ಒಳ ಉಡುಪು ಕಾಣುತ್ತದೆ. ಇದನ್ನು ನೋಡುವ ರಶ್ಮಿಕಾ ಮನದಲ್ಲಿಯೇ ಸುಖಿಸುತ್ತಾರೆ. ಈ ಎರಡೂ ಜಾಹಿರಾತುಗಳು ಕೀಳು ಮಟ್ಟದ ಆಲೋಚನೆಯನ್ನು ಹೊಂದಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.