ವಿಧಾನಸಭೆಯಲ್ಲಿಂದು ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಅವರು 1999ರಲ್ಲಿ ಬಳ್ಳಾರಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಸುಷ್ಮಸ್ವರಾಜ್ ಬಿಜೆಪಿ ಅಭ್ಯರ್ಥಿಯಾಗಿ, ಕಾಂಗ್ರೆಸ್‍ನ ಅಭ್ಯರ್ಥಿ ಸೋನಿಯಾಗಾಂಧಿ ವಿರುದ್ಧ ಸ್ಪರ್ಧಿಸಿದ್ದರು. ಬಿಜೆಪಿ ಕಾರ್ಪೊರೇಟರ್ ಆಗಿದ್ದ ನನ್ನನ್ನು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವಂತೆ ಸೂಚನೆ ನೀಡಿತ್ತು.
ಚುನಾವಣೆಯಲ್ಲಿ ನಾನು ಮತ್ತು ಸುಷ್ಮಾಸ್ವರಾಜ್ ಇಬ್ಬರೂ ಸೋತೆವು. ಹಾಗೇ ಅವರನ್ನು ನೆನಪಿಸಿಕೊಳ್ಳುತ್ತಾ ಅವರು ನನಗೆ ಒಳ್ಳೆ ರೌಡಿ ಥರ ಇದ್ದೀಯ ಮೊದ್ಲು ಉದ್ದದ ಕೂದಲನ್ನು ಕಟ್ ಮಾಡಿಸ್ಕೋ ಎಂದು ಶ್ರೀರಾಮುಲು ಅವರಿಗೆ ಸುಷ್ಮಾಸ್ವರಾಜ್ ಬುದ್ಧಿವಾದ ಹೇಳಿದರಂತೆ.