ಕಂಗನಾ ರಣಾವತ್ ಗೆ ತೆರಿಗೆ ಕಟ್ಟಲೂ ಹಣವಿಲ್ಲ!

Date:

ಸಿನಿಮಾಗಳಿಗಿಂತ ಜಾಸ್ತಿ ಕಾಂಟ್ರವರ್ಸಿಗಳಿಂದಲೇ ಸದ್ದು-ಸುದ್ದಿ ಮಾಡುತ್ತಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಈಗ ತೆರಿಗೆ ಕೂಡ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ಬಂದಿದೆಯಂತೆ, ಈ ಕುರಿತು ಮೊದಲ ಬಾರಿಗೆ ಸಾರ್ವಜನಿಕವಾಗಿ ಕಂಗನಾ ಹೇಳಿಕೊಂಡಿದ್ದಾರೆ.
ಕಳೆದ ವರ್ಷದ ಅರ್ಧ ತೆರಿಗೆಯನ್ನು ಕೂಡ ಕಂಗನಾ ಕಟ್ಟಲು ಕಷ್ಟಪಡುತ್ತಿದ್ದಾರಂತೆ. ಇದಕ್ಕೆಲ್ಲ ಕಾರಣ ಕೆಲಸ ಇಲ್ಲದಿರೋದು ಎಂದಿದ್ದಾರೆ. ಮೊದಲ ಬಾರಿಗೆ ತೆರಿಗೆ ಕಟ್ಟಲು ತಡವಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಂಗನಾ ರಣಾವತ್ ಅವರು “ನಾನು ಅತಿ ಹೆಚ್ಚು ತೆರಿಗೆ ಕಟ್ಟುವ ನಟಿ” ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ “ನಾನು ಅತಿ ಹೆಚ್ಚು ತೆರಿಗೆ ಕಟ್ಟು ನಟಿಯಾಗಿದ್ದರೂ ಕೂಡ ನನ್ನ ಸಂಪಾದನೆಯಲ್ಲಿ 45% ತೆರಿಗೆಗೆ ಹೋಗುವುದು. ಕೆಲಸ ಇಲ್ಲದೆ ಇರೋದರಿಂದ ನಾನು ಕಳೆದ ವರ್ಷ ಅರ್ಧದಷ್ಟು ಮಾತ್ರ ತೆರಿಗೆ ಕಟ್ಟಿದ್ದೇನೆ. ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಲೇಟ್ ಆಗಿ ತೆರೆಗೆ ಕಟ್ಟುತ್ತಿರುವುದು. ತೆರಿಗೆ ಉಳಿದುಕೊಂಡಿರುವುದಕ್ಕೆ ಸರ್ಕಾರ ಕೂಡ ಬಡ್ಡಿ ವಿಧಿಸುತ್ತಿದೆ. ಆದರೂ ನಾನು ಇದನ್ನು ಸ್ವೀಕರಿಸುತ್ತೇನೆ, ವೈಯಕ್ತಿಕವಾಗಿ ಈ ಸಮಯ ಎಲ್ಲರಿಗೂ ಕಷ್ಟವಾಗಿರಬಹುದು, ಆದರೆ ನಾವು ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ” ಎಂದು ಕಂಗನಾ ರಣಾವತ್ ಹೇಳಿಕೊಂಡಿದ್ದಾರೆ.


ಕಳೆದ ವರ್ಷ ಬಿಎಂಸಿ ಒಡೆದುಹಾಕಿದ್ದ ಕಂಗನಾರ ಮುಂಬೈ ಆಫೀಸ್ ಕಟ್ಟಡಕ್ಕೆ ಕಂಗನಾ ರಣಾವತ್ ಭೇಟಿ ನೀಡಿದ್ದರು. ಇನ್ನು ಫೋಟೋಕ್ಕೆ ಪೋಸ್ ನೀಡಿ ಎಂದು ಪಾಪರಾಜಿ ಕೇಳಿದಾಗ ಅವರು “ನನ್ನ ಕೆಲಸವನ್ನು ಮಾಡೋಕೆ ಬಿಡಿ” ಅಂತ ಉತ್ತರ ನೀಡಿದ್ದರು. ಕಳೆದ ಮೇ ತಿಂಗಳಿನಲ್ಲಿ ಕಂಗನಾಗೆ ಕೊರೊನಾ ಪಾಸಿಟಿವ್ ಬಂದಿತ್ತು. ಕಂಗನಾ ರಣಾವತ್ ಅವರ ಬಹುನಿರೀಕ್ಷಿತ ‘ತಲೈವಿ’ ಸಿನಿಮಾ ಕೊರೊನಾದಿಂದಾಗಿ ರಿಲೀಸ್ ಆಗೋದು ತಡವಾಗುತ್ತಿದೆ. ದಿವಂಗತ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಬಯೋಪಿಕ್ ಮಾಡಲು ಕಂಗನಾ ಸಹಿಹಾಕಿದ್ದಾರೆ.

 

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...