ಕಠಿಣ ಪರಿಶ್ರಮಕ್ಕೆ ನಿಧಾನವಾದ್ರೂ ಪ್ರತಿಫಲ ಸಿಕ್ಕೇ ಸಿಗುತ್ತೆ!

Date:

ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂಬುದಕ್ಕೆ ಐಎಎಸ್ ಅಧಿಕಾರಿ ಜೈ ಗಣೇಶ್ ಅವರ ಸಾಧನೆಯೇ ಸಾಕ್ಷಿ. ತಮಿಳುನಾಡಿನ ವೆಲ್ಲೂರಿನವರಾದ ಜೈಗಣೇಶ್. ಅವರು ಹುಟ್ಟಿದ್ದು ಬಡ ಕುಟುಂಬದಲ್ಲಿ. ತಂದೆ ಸಣ್ಣ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಗೃಹಿಣಿ. ಬರುತ್ತಿದ್ದ ಕಡಿಮೆ ಸಂಬಳದಲ್ಲಿ ನಾಲ್ಕು ಮಕ್ಕಳ ವಿದ್ಯಾಭ್ಯಾಸ ಮತ್ತು ಸಂಸಾರದ ಹೊರೆಯನ್ನು ಅವರ ತಂದೆ ನಿಭಾಯಿಸುತ್ತಿದ್ದರು.ಜೈಗಣೇಶ್ ಹತ್ತನೇ ತರಗತಿ ಪಾಸಾದ ಬಳಿಕ ತಮಿಳುನಾಡಿನ ವೆಲ್ಲೂರಿನಲ್ಲೇ ಪಾಲಿಟೆಕ್ನಿಕ್ ಕೋರ್ಸ್‌ಗೆ ಸೇರಿದರು. ಈ ಕೋರ್ಸ್ ಮಾಡಿದರೆ ಬಹುಬೇಗನೆ ಕೆಲಸ ದೊರೆಯುತ್ತದೆ ಎಂಬುದು ಅವರ ಆಸೆಯಾಗಿತ್ತು. ಪಾಲಿಟೆಕ್ನಿಕ್ ಕೋರ್ಸ್‌ನಲ್ಲಿ ಶೇಕಡ 91ರಷ್ಟು ಅಂಕಗಳು ಬಂದಿದ್ದರಿಂದ ಸರ್ಕಾರಿ ಕೋಟಾದಲ್ಲಿ ಎಂಜಿನಿಯರಿಂಗ್ ಸೀಟ್ ದೊರೆಯಿತು. ಬಡತನದ ಬದುಕಿನ ನಡುವೆಯೇ ಎಂಜಿನಿಯರಿಂಗ್ ಪದವಿ ಮುಗಿಸಿದರು.ಇನ್ನು ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ಕೆಲಸ ಹುಡುಕಿಕೊಂಡು ಜೈಗಣೇಶ್ ನಮ್ಮ ಬೆಂಗಳೂರಿಗೆ ಬಂದರು. ಬೆಂಗಳೂರಿನ ಪೀಣ್ಯ ಇಂಡಸ್ಟ್ರೀಲ್ ಏರಿಯಾದಲ್ಲಿ ಕೆಲಸವೇನೋ ಸಿಕ್ಕಿತು, ಆದರೆ ಸಂಬಳ ಕೇವಲ 2500 ರೂಪಾಯಿ! ಇಷ್ಟು ಹಣ ಸಂಪಾದನೆ ಮಾಡಲು ಇಲ್ಲಿಗೆ ಬರಬೇಕೆ? ಎಂಬ ಚಿಂತೆ ಅವರನ್ನು ಕಾಡಿತು. ಯುಪಿಎಸ್‌ಸಿ ಪರೀಕ್ಷೆ ಬರೆಯುವ ಉದ್ದೇಶದಿಂದ ಜೈಗಣೇಶ್ ಬೆಂಗಳೂರು ಬಿಟ್ಟು ವೇಲೂರಿಗೆ ಮರಳಿದರು.ಏನೇ ಆಗಲಿ ನಾನೇ ಯುಪಿಎಸ್ ಸಿ ಓದಲೇ ಬೇಕೆಂದು ಜೈ ಗಣೇಶ್ ನಿರ್ಧರಿಸಿದರು. ತಂದೆಯ ಬೋನಸ್ ಹಣದಲ್ಲಿ ಕೊನೆಗೂ ಯುಪಿಎಸ್‌ಸಿ ಪರೀಕ್ಷೆ ಕಟ್ಟಿ, ಅಧ್ಯಯನ ಸಾಮಗ್ರಿಗಳನ್ನು ಖರೀದಿಸಿ ಓದತೊಡಗಿದರು. ಮತ್ತೆ ಸಿನಿಮಾ ಟಾಕೀಸ್, ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತ ಅಧ್ಯಯನ ನಡೆಸಿದರು. ಆದರೆ, ಪ್ರತಿ ಬಾರಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಜೈ ಗಣೇಶ್ ನಿರೀಕ್ಷಿತ ಫಲಿತಾಂಶ ಬರುತ್ತಿರಲಿಲ್ಲ.ನೋಡಿ, ಜೈ ಗಣೇಶ್ ಹೀಗೆ, ಸತತ ಏಳು ವರ್ಷಗಳಿಂದ ಪ್ರಯತ್ನಪಟ್ಟರೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿ ಆಗುತ್ತಿರಲಿಲ್ಲ. ನಿರೀಕ್ಷಿತ ಫಲಿತಾಂಶವೂ ಬರುತ್ತಿರಲಿಲ್ಲ. ಇನ್ನು ಕೊನೆಯ ಪ್ರಯತ್ನವಾಗಿ ಪರೀಕ್ಷೆಗೆ ಕುಳಿತು ಜೈ ಗಣೇಶ್, 2008ರಲ್ಲಿ 156ನೇ ರ್ಯಾಂಕ್‌ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು. ಕೊನೆಯ ಯತ್ನದಲ್ಲಿ ಯಶಸ್ವಿಯಾಗುವ ಮೂಲಕ ದೇಶದ ಗಮನ ಸೆಳೆದರು. ಏನೇ ಹೇಳಿ, ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂಬುದಕ್ಕೆ ಐಎಎಸ್ ಅಧಿಕಾರಿ ಜೈ ಗಣೇಶ್ ಅವರ ಸಾಧನೆಯೇ ಸಾಕ್ಷಿ ಅಲ್ಲವೇ?

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...