ಮಫ್ತಿ ತಮಿಳು ಚಿತ್ರಕ್ಕೆ ಬಿತ್ತು ಬ್ರೇಕ್..! ಬಹುನಿರೀಕ್ಷಿತ ಭೈರತಿ ರಣಗಲ್ಲು ಪ್ರಾಜೆಕ್ಟ್ ಕೈಗೆತ್ತಿಕೊಂಡರು ನರ್ತನ್..

Must read

ಮಫ್ತಿ ಕನ್ನಡ ಚಿತ್ರರಂಗ ಕಂಡ ಸ್ಪೆಷಲ್ ಅಂಡರ್ ವರ್ಲ್ಡ್ ಚಿತ್ರಗಳಲ್ಲಿ ಒಂದು. ಔಟ್ ಅಂಡ್ ಔಟ್ ಮಾಸ್ ಸಬ್ಜೆಕ್ಟ್ ಅನ್ನು ಮೌನದಲ್ಲಿಯೂ ಸಹ ಹೇಳಬಹುದು ಎಂಬುದನ್ನು ತೋರಿಸಿಕೊಟ್ಟ ಚಿತ್ರ ಮಫ್ತಿ. ಇನ್ನು ಈ ಚಿತ್ರದಲ್ಲಿ ಶ್ರೀಮುರಳಿ ಮತ್ತು ಶಿವಣ್ಣ ಗಣ ಹಾಗೂ ಭೈರತಿ ರಣಗಲ್ಲು ಪಾತ್ರಗಳಲ್ಲಿ ಕಾಣಿಸಿಕೊಂಡು ಮಿಂಚಿದ್ದರು. ಈ ಚಿತ್ರದ ಮೂಲಕ ನಿರ್ದೇಶಕ ನರ್ತನ್ ಅವರ ಹೆಸರು ದಕ್ಷಿಣ ಭಾರತದಾದ್ಯಂತ ಪ್ರಜ್ವಲಿಸಿದ್ದು ಸುಳ್ಳಲ್ಲ. ಅಲ್ಲದೆ ಇದೇ ಚಿತ್ರವನ್ನು ತಮಿಳಿನಲ್ಲಿ ನಿರ್ದೇಶನ ಮಾಡುವಂತೆ ನರ್ತನ್ ಅವರಿಗೆ ದೊಡ್ಡ ಆಫರ್ ಸಹ ಬಂದಿತ್ತು.


ಈ ಸಲುವಾಗಿಯೇ ತಮಿಳಿನ ಮಫ್ತಿ ಚಿತ್ರದ ಮೇಲೆ ಗಮನ ಹರಿಸಿದ ನರ್ತನ್ ಅವರಿಗೆ ಇದೀಗ ನಿರಾಸೆ ಉಂಟಾಗಿದೆ ಯಾಕೆಂದರೆ ಈ ಚಿತ್ರದಲ್ಲಿ ಅಭಿನಯಿಸಬೇಕಿತ್ತು ನಟ ಸಿಂಬು ಮತ್ತು ನಿರ್ಮಾಪಕರ ನಡುವಿನ ಒಳ ಜಗಳದಿಂದ ಮಫ್ತಿ ತಮಿಳು ರಿಮೇಕ್ ನೆಟ್ಟಿರುವ ಯಾವ ಲಕ್ಷಣವೂ ಕಾಣುತ್ತಿಲ್ಲ.ಹೀಗಾಗಿ ನರ್ತನ್ ಅವರು ಮಫ್ತಿ ತಮಿಳು ರಿಮೇಕ್ ಅನ್ನು ಬದಿಗೆ ತಳ್ಳಿ ತಮ್ಮ ಬಹುನಿರೀಕ್ಷಿತ ಪ್ರಾಜೆಕ್ಟ್ ಭೈರತಿ ರಣಗಲ್ಲು ಅನ್ನು ಕೈಗೆತ್ತಿಕೊಂಡಿದ್ದಾರೆ. ಹಾಗೆಯೇ ಈ ಚಿತ್ರದಲ್ಲಿ ಭೈರತಿ ರಣಗಲ್ಲು ಪಾತ್ರದಲ್ಲಿ ಶಿವಣ್ಣ ಅವರು ಅಭಿನಯಿಸಲಿದ್ದು ಪಕ್ಕಾ ಮಾಸ್ ಚಿತ್ರ ಇದಾಗಲಿದೆ.

- Advertisement -spot_img

More articles

- Advertisement -spot_img

Latest article