ಕಡಲೆಕಾಯಿ ತಿನ್ನೋದ್ರಿಂದಾಗುವ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ
ಕಡಲೆಕಾಯಿಯಲ್ಲಿ ಪ್ರೋಟೀನ್, ಕೊಬ್ಬು ಮತ್ತು ಫೈಬರ್ ಸಮೃದ್ಧವಾಗಿದೆ. ಸಾಮಾನ್ಯವಾಗಿ ಕಡಲೆಕಾಯಿ ಕೊಬ್ಬನ್ನು ಹೊಂದಿದೆ. ಅದನ್ನು ‘ಉತ್ತಮ ಕೊಬ್ಬುಗಳು’ ಎಂದು ಕರೆಯಲಾಗುತ್ತದೆ. ಈ ರೀತಿಯ ಕೊಬ್ಬುಗಳು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಉತ್ತೇಜಿಸುತ್ತದೆ. ಆರೋಗ್ಯಕರವಾದ ಹೃದಯಕ್ಕೆ ಬಹಳ ಪ್ರಯೋಜನಕಾರಿ. ನಿಮ್ಮ ತೂಕ ಇಳಿಕೆಗೆ ಕಡಲೆಬೀಜ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಇಷ್ಟೆಲ್ಲಾ ಪ್ರಯೋಜನಕಾರಿಯಾಗಿರುವ ಕಡಲೆಕಾಯಿಯ ಬೀಜದ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಿ: ಕಡಲೆಕಾಯಿ ತಿನ್ನುವುದು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇಲ್ಲಿ ನೆನಪಿಡಬೇಕಾದ ವಿಷಯ, ನಾವು ಮಾತನಾಡುತ್ತಿರುವುದು ಕಡಲೆಕಾಯಿ ಬಗ್ಗೆ, ಕಡಲೆಕಾಯಿ ಎಣ್ಣೆಯ ಬಗ್ಗೆ ಅಲ್ಲ. ಕಡಲೆಕಾಯಿ ಎಣ್ಣೆಯನ್ನು ಅಧಿಕವಾಗಿ ಸೇವಿಸಿದರೆ, ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಾಗುವ ಸಾಧ್ಯತೆಯಿದೆ. ಕೆಲವು ಸಂಶೋಧನೆಗಳು ಕಡಲೆಕಾಯಿಯನ್ನು ವಾರದಲ್ಲಿ 5 ದಿನಗಳು ಸಣ್ಣ ಪ್ರಮಾಣದಲ್ಲಿ ಸೇವಿಸಿದರೆ ಅದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ.
ಶೀತಕ್ಕೆ ಪರಿಹಾರ: ಚಳಿಗಾಲವಾಗಲಿ, ಮಳೆಯಾಗಲಿ, ಬೆಲ್ಲದೊಂದಿಗೆ ಕಡಲೆಕಾಯಿಯನ್ನು ತಿನ್ನುವುದು ದೇಹವನ್ನು ಬೆಚ್ಚಗಿಡುತ್ತದೆ. ಇದು ಶೀತ ಮತ್ತು ನೆಗಡಿಯಿಂದ ರಕ್ಷಿಸುತ್ತದೆ.
ಜೀರ್ಣಕ್ರಿಯೆ ಉತ್ತಮ: ಊಟದ ನಂತರ, ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಕಡಲೆಕಾಯಿಯನ್ನು ತಿನ್ನಬಹುದು. ಕಡಲೆಕಾಯಿ ಧಾನ್ಯಗಳಲ್ಲಿ ಫೈಬರ್ ಕಂಡುಬರುತ್ತದೆ, ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
ಕಣ್ಣುಗಳಿಗೆ ಪರಿಣಾಮಕಾರಿ: ಕಡಲೆಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಕಣ್ಣುಗಳು ಆರೋಗ್ಯವಾಗಿರುತ್ತವೆ . ಕಡಲೆಕಾಯಿಯಲ್ಲಿ ‘ಬೀಟಾ ಕ್ಯಾರೋಟಿನ್’ ಇದ್ದು, ಇದು ಕಣ್ಣುಗಳಿಗೆ ಒಳ್ಳೆಯದು. ಕಡಲೆಕಾಯಿಯನ್ನು ಸಮತೋಲಿತ ಪ್ರಮಾಣದಲ್ಲಿ ಸೇವಿಸಿದರೆ, ಇದು ಕಣ್ಣಿನ ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಕಡಲೆಕಾಯಿ ಒತ್ತಡವನ್ನು ನಿವಾರಿಸುತ್ತದೆ : ಕಡಲೆಕಾಯಿಯಲ್ಲಿ ಟೆಸ್ಟೋಫೆನ್ ಎಂಬ ಅಂಶವಿದೆ. ಇದು ವ್ಯಕ್ತಿಯ ಒತ್ತಡ ಕಡಿಮೆ ಮಾಡಿ, ನಿರಾಳತೆ ಅನುಭವಿಸಲು ಸಹಾಯ ಮಾಡುತ್ತದೆ.
ಚರ್ಮದ ಆರೋಗ್ಯ: ಕಡಲೆಕಾಯಿಯಲ್ಲಿ ಒಮೆಗಾ -6 ಕೊಬ್ಬು ಸಮೃದ್ಧವಾಗಿದೆ, ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದು ಉತ್ತಮ ಕೋಶಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕಂಡುಬರುವ ಎಲ್ಲಾ ಪ್ರೋಟೀನ್ಗಳು, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಮುಖದ ಸುಕ್ಕುಗಳನ್ನು ಸಹ ತೆಗೆದುಹಾಕುತ್ತವೆ.