ಕಣ್ಣು ಉರಿ ಸಮಸ್ಯೆ ಆಗ್ತಿದ್ಯಾ!? ಹಾಗಿದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

Date:

ಕಣ್ಣು ಉರಿ ಸಮಸ್ಯೆ ಆಗ್ತಿದ್ಯಾ!? ಹಾಗಿದ್ರೆ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!

ಕಣ್ಣುಗಳಲ್ಲಿ ಕಿರಿಕಿರಿ ಸಾಮಾನ್ಯ ಸಮಸ್ಯೆಯಾಗಿದೆ. ಕೆಲವೊಮ್ಮೆ ಕಣ್ಣುಗಳಲ್ಲಿನ ಕಿರಿಕಿರಿಯಿಂದ ಕಣ್ಣುಗಳು ಕೆಂಪಾಗುತ್ತವೆ. ಈ ರೀತಿ ಆಗಲು ಹಲವು ಕಾರಣಗಳಿವೆ. ಈ ಸಮಸ್ಯೆ ಉಲ್ಬಣಗೊಂಡರೆ ನೀವು ತಕ್ಷಣವೇ ವೈದ್ಯರನ್ನು ಭೇಟಿ ಮಾಡಬೇಕು. ಪ್ರಪಂಚದಾದ್ಯಂತ ಸುಮಾರು 2.2 ಶತಕೋಟಿ ಜನರು ದೃಷ್ಟಿಹೀನತೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಕಣ್ಣುಗಳ ಬಗ್ಗೆ ಸಂಪೂರ್ಣ ಕಾಳಜಿ ವಹಿಸುವುದು ಮುಖ್ಯವಾಗಿದೆ.

ಕಣ್ಣುಗಳು…ಮನುಷ್ಯನ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದು. ಹೀಗಾಗಿಯೇ ಇದರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ಅದರಲ್ಲೂ ಇಂದು ಮೊಬೈಲ್ ಮತ್ತು ಇತರೆ ಗ್ಯಾಜೆಟ್​ಗಳ ವೀಕ್ಷಣೆಯಿಂದ ಕಣ್ಣುಗಳ ಮೇಲೆ ದುಷ್ಫರಿಣಾಮಗಳೇ ಹೆಚ್ಚು. ಇಂತಹ ಸಮಯದಲ್ಲಿ ನಾವು ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ.

ದಿನವಿಡೀ ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್‌ ನೋಡುವುದರಿಂದ ಕಣ್ಣು ಉರಿ ಅಥವಾ ಕಣ್ಣು ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಇದಕ್ಕೆ ಒಂದು ಕಾರಣ ಕಣ್ಣಿನ ಮೇಲೆ ಬೀಳುವ ಒತ್ತಡವಾದರೆ, ಮತ್ತೊಂದು ಕಾರಣ ಗೆಜೆಟ್​ಗಳಿಂದ ಹೊರಸೂಸುವ ಬೆಳಕು. ಆದರೆ ಆಗೊಮ್ಮೆ ಹೀಗೊಮ್ಮೆ ಕಾಣಿಸಿಕೊಳ್ಳುವ ಇಂತಹ ಸಮಸ್ಯೆಗೆ ಸಿಂಪಲ್ ಆಗಿ ಪರಿಹಾರ ಕಂಡುಕೊಳ್ಳಬಹುದು.

ಸಾಮಾನ್ಯವಾಗಿ ಕಣ್ಣಿನ ನೋವಿನ ಸಮಸ್ಯೆ ಕಾಡುತ್ತಿದ್ದರೆ ರೋಸ್ ವಾಟರ್ ಮೂಲಕ ಪರಿಹಾರ ಕಾಣಬಹುದು. ಇದಕ್ಕಾಗಿ ನೀವು ರಾತ್ರಿ ಮಲಗುವ ವೇಳೆ ಕಣ್ಣಿನ ಮೇಲ್ಭಾಗದಲ್ಲಿ ರೋಸ್ ವಾಟರ್ ಸವರಬೇಕು. ಅಥವಾ ರೋಸ್ ವಾಟರ್ ಮಿಶ್ರಿತ ನೀರಿನಿಂದ ಕಣ್ಣುಗಳನ್ನು ತೊಳೆದು ಮಲಗಬಹುದು. ಹೀಗೆ ಮಾಡುವುದರಿಂದ ಕಣ್ಣು ಉರಿ ಅಥವಾ ಕಣ್ಣು ನೋವು ಕಡಿಮೆಯಾಗುತ್ತದೆ

ಇನ್ನು ಎಲ್ಲರಿಗೂ ಗೊತ್ತಿರುವ ಹಾಗೆ ಸೌತೆಕಾಯಿ ಕಣ್ಣು ಉರಿಗೆ ಉತ್ತಮ ಮನೆಮದ್ದು. ಸೌತೆಕಾಯಿಯನ್ನು ರೌಂಡ್ ಆಗಿ ತುಂಡರಿಸಿ, ಕೆಲವೊತ್ತು ಫ್ರಿಡ್ಜ್​ನಲ್ಲಿಡಿ. ಬಳಿಕ ಅದನ್ನು ಕಣ್ಣು ಮುಚ್ಚಿ ಕಣ್ಣಿನ ಮೇಲೆ ಇರಿಸಿ. ಹೀಗೆ ಪ್ರತಿನಿತ್ಯ 15 ರಿಂದ 30 ನಿಮಿಷ ಮಾಡಿದರೆ ಕಣ್ಣು ಉರಿ ಸಮಸ್ಯೆ ದೂರವಾಗುತ್ತದೆ.

ಸೌತೆಕಾಯಿಯಂತೆ ಆಲೂಗಡ್ಡೆ ತುಂಡನ್ನು ಕಣ್ಣುಗಳ ಮೇಲಿಟ್ಟು ವಿಶ್ರಾಂತಿ ಪಡೆಯುವುದರಿಂದ ಉರಿ ಕಡಿಮೆಯಾಗುತ್ತದೆ. ಇದಲ್ಲದೆ ಆಲೂಗಡ್ಡೆ ರಸವನ್ನು ಕಣ್ಣಿಗೆ ಹಚ್ಚಿಕೊಳ್ಳುವ ಮೂಲಕ ಕೂಡ ಪರಿಹಾರ ಕಾಣಬಹುದು.

ದಾಳಿಂಬೆ ಹಣ್ಣಿನಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಹಾಗೆಯೇ ಅದರ ಎಲೆಗಳ ಮೂಲಕ ಕೂಡ ಕಣ್ಣಿನ ಸಮಸ್ಯೆಗೆ ಪರಿಹಾರ ಕಾಣಬಹುದಾಗಿದೆ. ಇದಕ್ಕಾಗಿ ನೀವು ದಾಳಿಂಬೆ ಗಿಡದ ಎಲೆಗಳನ್ನು ಪುಡಿ ಮಾಡಿ ನೀರು ಬೆರೆಸಿ ಪೇಸ್ಟ್​ನಂತೆ ಮಾಡಿ. ಬಳಿಕ ಅದನ್ನು ಕಣ್ಣುಗಳ ಮೇಲೆ ಹಚ್ಚಿಕೊಳ್ಳಿ. ಇದನ್ನು10 ರಿಂದ 20 ನಿಮಿಷಗಳ ಬಳಿಕ ತೊಳೆಯಿರಿ.

Share post:

Subscribe

spot_imgspot_img

Popular

More like this
Related

ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

ಹಾಸನಾಂಬೆ ದೇವಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು...

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗೆ ಪಾಸ್ ಆಗಲು ಶೇ.33 ಅಂಕ ಸಾಕು: ಸಚಿವ ಮಧು ಬಂಗಾರಪ್ಪ

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗೆ ಪಾಸ್ ಆಗಲು ಶೇ.33 ಅಂಕ ಸಾಕು:...

ಚಿನ್ನದ ಬೆಲೆಯಲ್ಲಿ ದಿಢೀರ್‌ ಏರಿಕೆ! ಬೆಂಗಳೂರಿನಲ್ಲಿ ಎಷ್ಟಿದೆ ಗೋಲ್ಡ್‌ ಬೆಲೆ?

ಚಿನ್ನದ ಬೆಲೆಯಲ್ಲಿ ದಿಢೀರ್‌ ಏರಿಕೆ! ಬೆಂಗಳೂರಿನಲ್ಲಿ ಎಷ್ಟಿದೆ ಗೋಲ್ಡ್‌ ಬೆಲೆ? ಬೆಲೆ ಏರಲಿ,...

ಪ್ರತಿದಿನ ನಿಂಬೆ ಹಣ್ಣು ಸೇವನೆಯ 10 ಅದ್ಭುತ ಆರೋಗ್ಯ ಲಾಭಗಳು

ಪ್ರತಿದಿನ ನಿಂಬೆ ಹಣ್ಣು ಸೇವನೆಯ 10 ಅದ್ಭುತ ಆರೋಗ್ಯ ಲಾಭಗಳು ನಿಂಬೆಹಣ್ಣು ನಮ್ಮ...