ವಿಜಯ್ ಸೇತುಪತಿ ತಮಿಳು ಚಿತ್ರರಂಗ ಸೇರಿದಂತೆ ಭಾರತ ಚಿತ್ರಗದಲ್ಲೇ ಹೆಸರುಮಾಡಿರುವ ಸೇತುಪತಿ ಇದೀಗ ಬಾಲಿವುಡ್ ಗೆ ಜಿಗಿದಿರುವ ಅವರು ಬಾಲಿವುಡ್ ನಟಿ ಕತ್ರಿನಾ ಕೈಫ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲಿದೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಚರ್ಚೆಯಾಗುತ್ತಿದೆ . ಶ್ರೀರಾಮ್ ರಾಘವನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು , ಏಪ್ರಿಲ್ ತಿಂಗಳಲ್ಲಿ ಸಿನಿಮಾ ಶುರುವಾಗಲಿದೆ.ಇದೀಗ, ಈ ಚಿತ್ರದ ಕುರಿತು ಹೊಸ ಅಪ್‌ಡೇಡ್ ಹೊರಬಿದ್ದಿದ್ದು, ಈ ಸಿನಿಮಾದ ಅವಧಿ 90 ನಿಮಿಷ ಮಾತ್ರ ಇರಲಿದೆಯಂತೆ. ಸಾಮಾನ್ಯವಾಗಿ ಕಮರ್ಷಿಯಲ್ ಚಿತ್ರಗಳು 120 ನಿಮಿಷಗಳು ಇರುತ್ತದೆ. ಆದರೆ, ಕತ್ರಿನಾ ಮತ್ತು ಸೇತುಪತಿ ಸಿನಿಮಾ ಒಂದೂವರೆಗಂಟೆ ಮಾತ್ರ ತಯಾರಾಗಲಿದೆಯಂತೆ.
ಇದೀಗ ಮಾಸ್ಟರ್ ಚಿತ್ರದ ಯಶಸಿನಲ್ಲಿರುವ ವಿಜಯ್ ಸೇತುಪತಿ ತಳಪತಿ ವಿಜಯ್ ಅವರೊಡನೆ ಮಾಸ್ಟರ್ ಚಿತ್ರದಲ್ಲಿ ಮಿಂಚಿದ್ರು ವಿಜಯ್ ಸೇತುಪತಿ ಸಾಲು ಸಾಲು ಚಿತ್ರಗಳನ್ನ ಒಪ್ಪಿಕೊಂಡಿರೋ ಸೇತುಪತಿ ಅವರಿಗೆ ಪ್ರಶಾಂತ್ ನೀಲ್ ಅವರ ಮುಂದಿನ ಸಲಾರ್ ಚಿತ್ರದಲ್ಲೂ ಸಹ ಪ್ರಭಾಸ್ ಅವರೊಡನೆ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಅಭಿನಯದ ಮೂಲಕ ತಮ್ಮದೆ ಅಭಿಮಾನಿ ಬಳಗ ಹೊಂದಿರುವ ಸೇತುಪತಿ ಕತ್ರಿನಾ ಕೈಫ್ ಜೊತೆ ಮಾಡುತ್ತಿರುವ ಚಿತ್ರ ನೋಡಲು ಅಭಿನಂದನೆಗಳು ಬಹು ನಿರೀಕ್ಷೆಇಂದ ಕಾಯುತ್ತಿದ್ದಾರೆ.