ಕನಕಪುರ ಅಗ್ನಿ ಅವಘಡ: ಒಂದೇ ಕುಟುಂಬದ ಮೂವರು ಚಿಕಿತ್ಸೆ ಫಲಿಸದೆ ಸಾವು

Date:

ಕನಕಪುರ ಅಗ್ನಿ ಅವಘಡ: ಒಂದೇ ಕುಟುಂಬದ ಮೂವರು ಚಿಕಿತ್ಸೆ ಫಲಿಸದೆ ಸಾವು

ರಾಮನಗರ: ಕನಕಪುರದಲ್ಲಿ ಅಡುಗೆ ಮಾಡುವ ವೇಳೆ ಅನಿಲ ಸೋರಿಕೆಯಿಂದ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಒಂದೇ ಕುಟುಂಬದ ಮೂವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಮೃತರನ್ನು ಸಿದ್ದರಾಜು (55), ಚಂದ್ರಮ್ಮ (50) ಹಾಗೂ ಪ್ರಶಾಂತ್ (22) ಎಂದು ಗುರುತಿಸಲಾಗಿದೆ. ಕನಕಪುರ ನಗರದ ಅಮರನಾರಾಯಣ ಬ್ಲಾಕ್‌ನಲ್ಲಿ ನಾಲ್ಕು ದಿನಗಳ ಹಿಂದೆ ಗ್ಯಾಸ್ ಸೋರಿಕೆಯಿಂದ ಈ ಅಗ್ನಿ ಅವಘಡ ಸಂಭವಿಸಿತ್ತು.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕುಟುಂಬದ ಸದಸ್ಯರನ್ನು ತಕ್ಷಣ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ತಂದೆ, ತಾಯಿ ಮತ್ತು ಮಗ ಮೂವರೂ ಸಾವನ್ನಪ್ಪಿದ್ದಾರೆ.

ಈ ಘಟನೆ ಕನಕಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರು ಹಾಗೂ ಸ್ಥಳೀಯರು ಕಂಬನಿ ಮಿಡಿದಿದ್ದು, ಇಡೀ ಪ್ರದೇಶದಲ್ಲಿ ಶೋಕದ ವಾತಾವರಣ ಆವರಿಸಿದೆ.

Share post:

Subscribe

spot_imgspot_img

Popular

More like this
Related

ನಿರ್ಮಲಾ ಸೀತಾರಾಮನ್ 9ನೇ ಬಜೆಟ್: ಆತ್ಮನಿರ್ಭರ, ವಿಕಸಿತ ಭಾರತಕ್ಕೆ ದಾರಿ: ಬಿ.ವೈ. ವಿಜಯೇಂದ್ರ

ನಿರ್ಮಲಾ ಸೀತಾರಾಮನ್ 9ನೇ ಬಜೆಟ್: ಆತ್ಮನಿರ್ಭರ, ವಿಕಸಿತ ಭಾರತಕ್ಕೆ ದಾರಿ: ಬಿ.ವೈ....

ಯುವಶಕ್ತಿ, ನಾರಿ ಶಕ್ತಿ, ರೈತರಿಗೆ ಆದ್ಯತೆ ನೀಡಿದ ಬಜೆಟ್: ಬಿ.ವೈ. ವಿಜಯೇಂದ್ರ ಶ್ಲಾಘನೆ

ಯುವಶಕ್ತಿ, ನಾರಿ ಶಕ್ತಿ, ರೈತರಿಗೆ ಆದ್ಯತೆ ನೀಡಿದ ಬಜೆಟ್: ಬಿ.ವೈ. ವಿಜಯೇಂದ್ರ...

ಏ.1ರಿಂದ ಹೊಸ ಕಾಯ್ದೆ ಜಾರಿ: ಅನಿವಾಸಿಗಳಿಗೆ MAT ವಿನಾಯಿತಿ, ಕನಿಷ್ಠ ತೆರಿಗೆ ದರದಲ್ಲಿ ರಿಲೀಫ್

ಏ.1ರಿಂದ ಹೊಸ ಕಾಯ್ದೆ ಜಾರಿ: ಅನಿವಾಸಿಗಳಿಗೆ MAT ವಿನಾಯಿತಿ, ಕನಿಷ್ಠ ತೆರಿಗೆ...

Budget 2026 Expectations: ಮಹಿಳೆ–ಯುವಕರ ಮೇಲೆ ಫೋಕಸ್, ಉದ್ಯೋಗಕ್ಕೆ ಹೊಸ ದಾರಿ

Budget 2026 Expectations: ಮಹಿಳೆ–ಯುವಕರ ಮೇಲೆ ಫೋಕಸ್, ಉದ್ಯೋಗಕ್ಕೆ ಹೊಸ ದಾರಿ ನವದೆಹಲಿ:...