No menu items!
13.5 C
Munich
Wednesday, April 22, 2026

LPG ಬಿಕ್ಕಟ್ಟು ತೀವ್ರ: ಗ್ಯಾಸ್ ಕೊರತೆಯಿಂದ ಆಟೋ ಚಾಲಕರ ಪರದಾಟ

Must read

LPG ಬಿಕ್ಕಟ್ಟು ತೀವ್ರ: ಗ್ಯಾಸ್ ಕೊರತೆಯಿಂದ ಆಟೋ ಚಾಲಕರ ಪರದಾಟ

ಹುಬ್ಬಳ್ಳಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ವಾಣಿಜ್ಯ ಹಾಗೂ ಗೃಹ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಉಂಟಾಗಿದ್ದು, ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಆಟೊ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಎಲ್‌ಪಿಜಿ ಅವಲಂಬಿತ ಆಟೊಗಳಿದ್ದು, ಪಂಪ್‌ಗಳಲ್ಲಿ ಸಮರ್ಪಕ ಗ್ಯಾಸ್ ಲಭ್ಯವಾಗದ ಕಾರಣ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

ದಿನಸಿ ದುಡಿಮೆ ಬಿಟ್ಟು 3ರಿಂದ 4 ಗಂಟೆಗಳ ಕಾಲ ಸರದಿಯಲ್ಲಿ ನಿಂತು ಆಟೊಗಳಿಗೆ ಗ್ಯಾಸ್ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದಕ್ಕೂ ಮಧ್ಯೆ, ಎಲ್‌ಪಿಜಿ ಪೂರೈಸುವ ಕಂಪನಿಗಳು ದರವನ್ನು ಏರಿಕೆ ಮಾಡಿದ್ದು, ಚಾಲಕರ ಮೇಲೆ ಹೆಚ್ಚುವರಿ ಭಾರ ಬಿದ್ದಿದೆ. ಈ ಹಿಂದೆ ಒಂದು ಲೀಟರ್ ಎಲ್‌ಪಿಜಿ 58ರಿಂದ 65 ರೂಪಾಯಿಗಳಲ್ಲಿ ಲಭ್ಯವಿದ್ದರೆ, ಈಗ 80ರಿಂದ 100 ರೂಪಾಯಿಗಳವರೆಗೆ ಏರಿಕೆಯಾಗಿದೆ.

ಪಂಪ್‌ಗಿಂತ ಪಂಪ್‌ಗೆ ದರದಲ್ಲಿ ವ್ಯತ್ಯಾಸ ಇರುವುದರಿಂದ ಚಾಲಕರು ಗೊಂದಲಕ್ಕೆ ಒಳಗಾಗಿದ್ದಾರೆ. ಕಡಿಮೆ ದರದ ಪಂಪ್‌ಗಳಲ್ಲಿ ಹೆಚ್ಚು ವಾಹನಗಳು ಸರದಿಯಲ್ಲಿ ನಿಲ್ಲುತ್ತಿರುವುದು ಸಾಮಾನ್ಯವಾಗಿದೆ.

ಇನ್ನೊಂದೆಡೆ, ಕಡಿಮೆ ದರದಲ್ಲಿ ಗ್ಯಾಸ್ ಮಾರಾಟ ಮಾಡುವ ಪಂಪ್‌ಗಳಲ್ಲಿ ಸ್ಟಾಕ್ ಬೇಗ ಖಾಲಿಯಾಗುತ್ತಿದ್ದು, ಪೂರೈಕೆ ಕಂಪನಿಗಳು ಸಮರ್ಪಕವಾಗಿ ಗ್ಯಾಸ್ ನೀಡುತ್ತಿಲ್ಲ ಎಂದು ಪಂಪ್ ಮಾಲೀಕರು ತಿಳಿಸಿದ್ದಾರೆ. ಇದರಿಂದ ಕೆಲ ಪಂಪ್‌ಗಳನ್ನು ವಾರದಲ್ಲಿ ಒಂದು ಅಥವಾ ಎರಡು ದಿನ ಮುಚ್ಚುವ ಪರಿಸ್ಥಿತಿ ಉಂಟಾಗಿದೆ.

ಆದರೆ, ಕೆಲವು ಪಂಪ್‌ಗಳಲ್ಲಿ ಗ್ಯಾಸ್ ಇದ್ದರೂ ಇಲ್ಲವೆಂದು ಹೇಳಿ ದರ ಹೆಚ್ಚಿಸಲಾಗುತ್ತಿದೆ ಎಂಬ ಆರೋಪವನ್ನು ಆಟೊ ಚಾಲಕರು ಮಾಡಿದ್ದಾರೆ. ಸ್ಟಾಕ್ ಇಲ್ಲದಿದ್ದರೆ ಕಾಳ ಸಂತೆಯಲ್ಲಿ ಗ್ಯಾಸ್ ಹೇಗೆ ಮಾರಾಟವಾಗುತ್ತಿದೆ ಎಂದು  ಪ್ರಶ್ನಿಸಿದ್ದಾರೆ.

- Advertisement -spot_img

More articles

- Advertisement -spot_img

Latest article