ನಿನ್ನೆಯಿಂದ ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಬಾವುಟ ಹರಿಸುವುದರ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಇಂದು ಶೃಂಗೇರಿ ತಾಲ್ಲೂಕು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಹ ಕನ್ನಡ ಬಾವುಟವನ್ನು ಹಾರಿಸಿಲ್ಲ. ಹೀಗಾಗಿ ಅಲ್ಲಿಯೂ ಸಹ ವಿವಾದಾತ್ಮಕ ಘಟನೆಯೊಂದು ನಡೆದಿದೆ. ಈ ಒಂದು ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಗರಿಷ್ಠ ಅಂಕ ಗಳಿಸಿದ್ದ ಸಂಕೀರ್ತ್ ಎಂಬ ವಿದ್ಯಾರ್ಥಿಗೆ ಸನ್ಮಾನ & ಪ್ರಶಸ್ತಿಯನ್ನು ನೀಡಲು ಕರೆಸಲಾಗಿತ್ತು.
ಆದರೆ ಕಾರ್ಯಕ್ರಮದಲ್ಲಿ ಕನ್ನಡ ಧ್ವಜವನ್ನು ಹಾರಿಸಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿ ಸಂಗೀತ ಅವರ ತಂದೆ ಯಾವುದೇ ಕಾರಣಕ್ಕೂ ನನ್ನ ಮಗನಿಗೆ ಪ್ರಶಸ್ತಿ ಮತ್ತು ಸನ್ಮಾನ ಬೇಡ , ಕನ್ನಡ ಧ್ವಜವನ್ನು ಹಾರಿಸಿ ಕನ್ನಡ ರಾಜ್ಯೋತ್ಸವ ಮಾಡದ ವೇದಿಕೆಯಲ್ಲಿ ನನ್ನ ಮಗ ಪ್ರಶಸ್ತಿ ಸ್ವೀಕರಿಸುವ ಅಗತ್ಯ ಇಲ್ಲ ಎಂದು ಖಡಕ್ ಆಗಿ ಹೇಳಿದರು. ಒಟ್ಟಿನಲ್ಲಿ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಕನ್ನಡ ಧ್ವಜ ಹಾರಿಸಿದೇ ಪ್ರಶಸ್ತಿ ನೀಡಲು ಮುಂದಾಗಿದ್ದವರಿಗೆ ವಿದ್ಯಾರ್ಥಿಯ ತಂದೆ ತಕ್ಕ ಪಾಠ ಕಲಿಸಿದ್ದಾರೆ.