ಇತ್ತೀಚೆಗಷ್ಟೇ ಕನ್ನಡದ ರ್ಯಾಪ್ ಸಿಂಗರ್ ಎಂದೇ ಕರೆಸಿಕೊಳ್ಳುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಎಂಗೇಜ್ಮೆಂಟ್ ಆಗಿತ್ತು. ಇನ್ನು ಇದಾದ ಬೆನ್ನಲ್ಲೇ ಕನ್ನಡದಲ್ಲಿ ಹಲವಾರು ಆಲ್ಬಂ ಸಾಂಗ್ ಮಾಡಿರುವ ಆಲ್ ಓಕೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಯಾಕಿಂಗೆ ಡೋಂಟ್ ವರಿ ಮತ್ತು ನಾನ್ ಕನ್ನಡಿಗ ಎಂಬ ಜನಪ್ರಿಯ ಹಿಟ್ ಹಾಡುಗಳನ್ನು ನೀಡಿರುವ ಆಲ್ ಓಕೆ ಅವರು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಹಲವು ವರ್ಷಗಳಿಂದ ತಾವು ಪ್ರೀತಿಸುತ್ತಿದ್ದ ನಿಶಾ ನಟರಾಜನ್ ಎಂಬುವರನ್ನು ಆಲ್ ಓಕೆ ಅವರು ಮದುವೆಯಾಗಿದ್ದಾರೆ. ಹೌದು ನಿಶಾ ನಟರಾಜನ್ ಮತ್ತು ಅಲೋಕ್ ಬಾಬು ಅವರು ಹಲವಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ತದನಂತರ ಕುಟುಂಬದವರ ಒಪ್ಪಿಗೆಯ ಮೇರೆಗೆ ಶಾಸ್ತ್ರೋಕ್ತವಾಗಿ ಇಂದು ಮದುವೆಯಾಗಿದ್ದಾರೆ. ಇವರ ಮದುವೆಗೆ ಚಂದನವನದ ಹಲವಾರು ನಟ ಮತ್ತು ನಟಿಯರು ಆಗಮಿಸಿ ಶುಭ ಕೋರಿದರು.