ಕಪ್ಪು ಬಣ್ಣದ ತುಟಿ: ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು
ಹುಡುಗಿಯರು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ಅನೇಕ ರೀತಿಯ ಕ್ರೀಮ್ಗಳು, ಮನೆಮದ್ದುಗಳನ್ನು ಹಚ್ಚಿಕೊಳ್ಳುತ್ತಾರೆ. ಕಣ್ಣು, ಮೂಗು, ಕಿವಿ ಮತ್ತು ಕೆನ್ನೆಗಳಂತೆ, ತುಟಿಗಳು ಸಹ ಮುಖದ ಬಹುಮುಖ್ಯವಾದ ಭಾಗ. ತುಟಿಗಳ ಮೇಲಿನ ಚರ್ಮದ ಬಣ್ಣ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಕೆಲವರ ತುಟಿ ಕಪ್ಪಾಗಿರುತ್ತದೆ.
ಇದರಿಂದ ಅವರು ಬೇರೆಯವರೊಂದಿಗೆ ಮಾತನಾಡಲು ಮುಜುಗರಕ್ಕೊಳಗಾಗುತ್ತಾರೆ. ಅಲ್ಲದೇ ತಮ್ಮ ತುಟಿಯ ಬಣ್ಣ ಮರೆಮಾಚಲೆಂದೇ ಗಾಢವಾದ ಲಿಪ್ ಸ್ಟಿಕ್ ಬಳಸುತ್ತಾರೆ. ಹೀಗಾಗಿ ಕಪ್ಪು ತುಟಿಗೆ ಕೆಲವು ಸ್ಕ್ರಬ್ಗಳನ್ನು ಮಾಡಬೇಕು. ಸ್ಕ್ರಬ್ ಮಾಡಿದರೆ ತುಟಿ ಮೃದುವಾಗುವುದು.
ತೆಂಗಿನ ಎಣ್ಣೆ ಮತ್ತು ಹನಿ ತುಟಿಯನ್ನು ಕೋಮಲವಾಗಿಸಲು ತೆಂಗಿನ ಎಣ್ಣೆ ಮತ್ತು ಹನಿ ಸ್ಕ್ರಬ್ ಸಹಾಯಕವಾಗಿದೆ. ಒಂದು ಚಮಚ ಜೇನು ತುಪ್ಪ, ತೆಂಗಿನ ಎಣ್ಣೆ ಮತ್ತು ಕಂದು ಸಕ್ಕರೆ ಬೇಕಾಗುತ್ತದೆ. ಈ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿ, ಪೇಸ್ಟ್ ರೀತಿ ಸಿದ್ಧಪಡಿಸಿ. ಬಳಿಕ ತುಟಿಗೆ ಹಚ್ಚಿ. ಸ್ವಲ್ಪ ಹೊತ್ತು ಪೇಸ್ಟ್ ತುಟಿಯ ಮೇಲೆ ಇರಬೇಕು. ಆ ನಂತರ ನೀರಿನಲ್ಲಿ ತೊಳೆಯಿರಿ.
ಕಾಫಿ ಸ್ಕ್ರಬ್ ಕಾಫಿ ಸ್ಕ್ರಬ್ನ ಸಿದ್ಧಪಡಿಸಲು ಒಂದು ಚಮಚ ಕಾಫಿ ಪುಡಿ ಮತ್ತು ಜೇನುತುಪ್ಪ ಬೇಕು. ಇವೆರಡನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ರೆಡಿಯಾದ ಮಿಶ್ರಣವನ್ನು ತುಟಿಗೆ ಹಚ್ಚಿ. ಎರಡರಿಂದ ಮೂರು ನಿಮಿಷಗಳ ಕಾಲ ಬೆರಳಿನಿಂದ ಲಘುವಾಗಿ ಮಸಾಜ್ ಮಾಡಿ. ಆ ಬಳಿಕ ತುಟಿಯನ್ನು ತೊಳೆಯಿರಿ. ಇದರಿಂದ ತುಟಿ ಒಣಗುವುದು ಕಡಿಮೆಯಾಗುತ್ತದೆ ಮತ್ತು ಸ್ವಚ್ಛವಾಗಿ ಕಾಣುತ್ತದೆ.
ಗುಲಾಬಿ ಸ್ಕ್ರಬ್ ಗುಲಾಬಿ ಸ್ಕ್ರಬ್ನ ಸಿದ್ಧಪಡಿಸಲು ಗುಲಾಬಿ ಹೂವಿನ ದಳಗಳು, ಜೇನುತುಪ್ಪ ಮತ್ತು ಹಾಲು ಬೇಕು. ಈ ಮೂರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್ ರೀತಿ ಸಿದ್ಧವಾದ ನಂತರ ತುಟಿಗೆ ಹಚ್ಚಿಕೊಳ್ಳಿ. ಇದರಿಂದ ತುಟಿ ಕಪ್ಪಾಗಿರುವುದು ಕಡಿಮೆಯಾಗುತ್ತದೆ.
ಆಲಿವ್ ಎಣ್ಣೆ ಆಲಿವ್ ಎಣ್ಣೆ ಬಳಸಿದರೆ ತುಟಿಯ ಕೋಮಲತೆಯನ್ನು ಕಾಪಾಡುತ್ತದೆ. ಕಪ್ಪು ತುಟಿಯಿಂದ ಮುಜುಗರಕ್ಕೆ ಒಳಗಾಗಿದ್ದರೆ, ಇದರ ಬಗ್ಗೆ ಇದೀಗ ಚಿಂತೆ ಬೇಡ. ಆಲಿವ್ ಎಣ್ಣೆ ಕಪ್ಪಾಗಿರುವ ತುಟಿಯನ್ನು ಪಿಂಕ್ ಅಥವಾ ಗುಲಾಬಿ ಬಣ್ಣಕ್ಕೆ ತಿರುಗಿಸುತ್ತದೆ. ಪ್ರತಿದಿನ ಆಲಿವ್ ಎಣ್ಣೆಯನ್ನು ತುಟಿಗೆ ಹಚ್ಚಬೇಕು. ಇದರಿಂದ ತುಟಿಯ ಬಣ್ಣ ಬದಲಾಗುವ ಜೊತಗೆ ಮೃದುವಾಗಿಸುವುದು.
ಚಾಕೊಲೇಟ್ ಸ್ಕ್ರಬ್ ಈ ಸ್ಕ್ರಬ್ನ ರೆಡಿ ಮಾಡಲು ಒಂದು ಚಮಚ ಕೋಕೋ ಪೌಡರ್, ಒಂದೂವರೆ ಚಮಚ ಬ್ರೌನ್ ಶುಗರ್, ಒಂದು ಚಮಚ ವೆನಿಲ್ಲಾ ಸಾರ, ಒಂದು ಚಮಚ ಜೇನುತುಪ್ಪ ಮತ್ತು ಎರಡು ಚಮಚ ಆಲಿವ್ ಎಣ್ಣೆ ಬೇಕು. ಈ ಎಲ್ಲವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್ ದಪ್ಪವಾಗಿರಬೇಕು. ಸಿದ್ಧವಾದ ಪೇಸ್ಟ್ನ ತುಟಿಗೆ ಹಚ್ಚಿ. ಎರಡು ಮೂರು ನಿಮಿಷಗಳ ಬಳಿಕ ತಿಳಿ ಬಟ್ಟೆಯಿಂದ ಒರೆಸಿ. ಇದರಿಂದ ತುಟಿ ಮೃದುವಾಗುತ್ತದೆ.
ದಾಲ್ಚಿನ್ನಿ ಇದು ಅಡುಗೆಯ ರುಚಿಯನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ. ಜೊತೆಗೆ ತುಟಿಯನ್ನು ಕಾಪಾಡುವ ಸಾಮರ್ಥ್ಯ ಇದರಲ್ಲಿದೆ. ಒಂದು ಚಮಚ ಜೇನುತುಪ್ಪ, ಆಲಿವ್ ಎಣ್ಣೆ ಮತ್ತು ಒಂದು ಚಿಟಿಗೆ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಚೆನ್ನಾಗಿ ಪೇಸ್ಟ್ ಮಾಡಿ. ರೆಡಿಯಾದ ಪೇಸ್ಟ್ನ ತುಟಿಗೆ ಹಚ್ಚಿ. ಬಳಿಕ ಕೆಲವು ನಿಮಿಷಗಳ ಕಾಲ ಬೆರಳಿನಿಂದ ಲುಘುವಾಗಿ ಮಸಾಜ್ ಮಾಡಿ. ಇದರಿಂದ ಕಪ್ಪಾಗಿರುವ ತುಟಿ ಕೆಂಪಾಗುವುದು ಮತ್ತು ಮೃದುವಾಗುವುದು.