ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ರಸ್ತೆ ಬದಿ ಪಾರ್ಕಿಂಗ್‌ಗೆ ಶುಲ್ಕ: ಜಿಬಿಎ ಹೊಸ ನಿಯಮಕ್ಕೆ ಸಜ್ಜು
ಬೆಂಗಳೂರು: ಬೆಂಗಳೂರಿನ ಪ್ರಮುಖ ವ್ಯಾಪಾರ ಕೇಂದ್ರವಾದ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊಸ ಶಾಕ್ ನೀಡಲು ಮುಂದಾಗಿದೆ. ರಸ್ತೆ ಬದಿಯ ಪಾರ್ಕಿಂಗ್‌ಗೆ ನಿಗದಿತ ಶುಲ್ಕ ವಿಧಿಸುವ ಪ್ರಸ್ತಾವನೆಯನ್ನು ಜಿಬಿಎ ಸರ್ಕಾರಕ್ಕೆ ಸಲ್ಲಿಸಿದ್ದು, ಸರ್ಕಾರದ ಅನುಮೋದನೆ ಸಿಕ್ಕ ತಕ್ಷಣ ಈ ನಿಯಮ ಜಾರಿಗೆ ಬರಲಿದೆ.
ಗಂಟೆಗಳ ಲೆಕ್ಕಾಚಾರದಲ್ಲಿ ಪಾರ್ಕಿಂಗ್ ಶುಲ್ಕ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ದ್ವಿಚಕ್ರ ವಾಹನಗಳು ಹಾಗೂ ಕಾರುಗಳಿಗೆ ಪ್ರತ್ಯೇಕವಾಗಿ ಪಾರ್ಕಿಂಗ್ ಶುಲ್ಕ ನಿಗದಿಪಡಿಸಲಾಗಿದೆ.
ದ್ವಿಚಕ್ರ ವಾಹನಗಳಿಗೆ:
▪️ 1 ಗಂಟೆಗೆ – ₹15
ಕಾರುಗಳಿಗೆ:
▪️ 1 ಗಂಟೆಗೆ – ₹30
ದಿನಪೂರ್ತಿ ಪಾರ್ಕಿಂಗ್ ದರ ಎಷ್ಟು?
ದಿನವಿಡೀ ವಾಹನ ನಿಲುಗಡೆ ಮಾಡುವವರಿಗೆ ಪ್ರತ್ಯೇಕ ಶುಲ್ಕ ನಿಗದಿಯಾಗಿದೆ.
ದ್ವಿಚಕ್ರ ವಾಹನ:
▪️ ದಿನಕ್ಕೆ – ₹175
ಕಾರು:
▪️ ದಿನಕ್ಕೆ – ₹300
ನಿತ್ಯ ಪಾರ್ಕಿಂಗ್ ಮಾಡುವವರಿಗೆ ವಾರ್ಷಿಕ ಪಾಸ್ ವ್ಯವಸ್ಥೆ
ಪ್ರತಿದಿನ ಕಮರ್ಷಿಯಲ್ ಸ್ಟ್ರೀಟ್‌ಗೆ ಬರುವ ವಾಹನ ಸವಾರರಿಗೆ ರಿಯಾಯಿತಿ ನೀಡುವ ಉದ್ದೇಶದಿಂದ ಜಿಬಿಎ ವಾರ್ಷಿಕ ಪಾಸ್ ವ್ಯವಸ್ಥೆಯನ್ನು ಕೂಡ ಪರಿಚಯಿಸಲು ನಿರ್ಧರಿಸಿದೆ.
ದ್ವಿಚಕ್ರ ವಾಹನ ವಾರ್ಷಿಕ ಪಾಸ್: ₹3,000
ಕಾರ್ ವಾರ್ಷಿಕ ಪಾಸ್: ₹9,000
ಈ ಪಾರ್ಕಿಂಗ್ ಶುಲ್ಕ ವ್ಯವಸ್ಥೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ದೊರೆತ ಕೂಡಲೇ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ರಸ್ತೆ ಬದಿ ಪೇ & ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಜಿಬಿಎ ತಿಳಿಸಿದೆ.






