ನಟ ದುನಿಯಾ ವಿಜಯ್ ನಟಿಸಿ ಮೊದಲ ನಿರ್ದೇಶನ ಮಾಡಲಿರುವ ‘ಸಲಗ’ ಚಿತ್ರ ಸದ್ಯ ಮೇಕಿಂಗ್ ನಿಂದಲ್ಲೇ ಭಾರಿ ಸುದ್ದಿ ಮಾಡುತ್ತಿದೆ, ಇಷ್ಟು ದಿನ ತೆರೆಮೇಲೆ ನಾಯಕನಾಗಿ ಅಬ್ಬರಿಸಿದ್ದ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುವ ಸಲುವಾಗಿ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ.
ಈಗಾಗಲೆ ಇದೇ ತಿಂಗಳ ಜೂನ್ 6 ಕ್ಕೆ ಚಿತ್ರದ ಮುಹೂರ್ತಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿರುವ ‘ಸಲಗ’ ಚಿತ್ರತಂಡಕ್ಕೆ ಇದೀಗ ನಾಯಕನಟಿಯ ಎಂಟ್ರಿಯಾಗಿದೆ,
‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಮೂಲಕ ಎಲ್ಲರ ಗಮನವನ್ನು ಸೆಳೆದ ನಾಯಕಿ ಸಂಜನಾ ಆನಂದ್ ಈಗ ದುನಿಯಾ ವಿಜಯ್ ಜೊತೆಯಾಗಿದ್ದಾರೆ.
ಇದೇ ತಿಂಗಳು ಜೂನ್ 6 ರಂದು ಗವಿಪುರ ಗುಟ್ಟಳ್ಳಿಯಲ್ಲಿರುವ ಬಂಡೆ ಮಹಾಕಾಳಿ ದೇವಾಲಯದಲ್ಲಿ ಸಲಗ ಚಿತ್ರ ತನ್ನ ಮುಹೂರ್ಥವನ್ನು ಆಚರಿಸಿಕೊಳ್ಳಲಿದೆ ಈ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಿಚ್ಚ ಸುದೀಪ್ ಬರುವ ನಿರೀಕ್ಷೆ ಇದೆ.
ಇನ್ನುಳಿದಂತೆ ಚಿತ್ರದಲ್ಲಿ ಡಾಲಿ ಧನಂಜಯ್, ಕಾಕ್ರೋಚ್ ಸುಧಿ ಸೇರಿದಂತೆ ಟಗರು ತಂತ್ರಜ್ಞರು ಸಲಗ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ.