ನವದೆಹಲಿ:- ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ದೆಹಲಿಯಲ್ಲಿ ಸಚಿವ ಎಚ್ ಕೆ ಪಾಟೀಲ್ ಹರಿಹಾಯ್ದಿದ್ದಾರೆ.
ಕರ್ನಾಟಕ ಬರದಿಂದ ತತ್ತರಿಸಿ ಹೋಗಿದೆ. ಹೀಗಾಗಿ ಬರಪೀಡಿತ ಪ್ರದೇಶಗಳಿಗೆ ಪರಿಹಾರಕ್ಕಾಗಿ 6 ತಿಂಗಳಿಂದ ಒತ್ತಾಯ ಮಾಡ್ತಿದ್ದೇವೆ. ಮನರೇಗಾ ಯೋಜನೆಯಲ್ಲಿ 150 ದಿನ ಕೆಲಸ ಮಾಡಲು ಅವಕಾಶ ಮಾಡಿ ಕೊಡಿ ಅಂತಾ ಪ್ರಯತ್ನ ಮಾಡತಿದ್ದೇವೆ. ದುರ್ದೈವ ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ತಾತ್ಸಾರ ಮಾಡ್ತಿದೆ
ಏನಾದ್ರೂ ಮಾಡಿ ಅನಾನುಕೂಲ ಮಾಡಬೇಕು ಅಂತಿದೆ, ಇದೆಲ್ಲಾ ದುರ್ದೈವದ ಸಂಗತಿ. ತೆರಿಗೆಯಲ್ಲಿ ಯಾವ ರೀತಿ ಅನ್ಯಾಯ ಆಗ್ತಿದೆ.ಹಣಕಾಸು ಹಂಚಿಕೆಗೆ ವೇದಿಕೆ ಆಗಿತ್ತು ಯಾವ ರೀತಿ ಹಣ ಹಂಚಿಕೆ ಮಾಡಬೇಕು ಅಂತಾ. ಪ್ಲಾನಿಂಗ್ ಕಮೀಷನ್ ತೆಗೆದು ಹಾಕಿದ್ರು, ಏನು ಬೇಕಾದ್ರೂ ಮಾಡೋದಕ್ಕೆ ಇವರು ಹೊರಟಿದ್ದಾರೆ. ಆಯೋಗದ ನಿಯಮಾವಳಿ, ಶಿಫಾರಸ್ಸಿನಂತೆ ಮಾಡಿದ್ದೇವೆ ಅಂತಾ ನಿಯಮಾವಳಿಗಳ ಬಗ್ಗೆ ಮಾತಾಡ್ತಾರೆ. ನಿಯಮಾವಳಿ ರೂಪಿಸೋ ಸಂದರ್ಭದಲ್ಲಿ ಯಾರಿಗೆ ಅವಕಾಶ ಮಾಡಿ ಕೊಟ್ಟಿದ್ದಾರೆ. ನಿಯಮಾವಳಿ ಮಾಡಿ ಅನ್ಯಾಯ ಮಾಡ್ತಿದ್ದಾರಾ? ಪ್ರತಿತೊಂದು ರಾಜ್ಯದೊಂದಿಗೆ ಮಾತಾಡಿ ನಿಯಮಾವಳಿ ಮಾಡಬೇಕು. ನೀವು ರೂಲ್ಸ್ ಫಾರ್ಮುಲೇಟ್ ಮಾಡದಿದ್ರೆ ನೀವು ಫಾಲ್ಸ್ ಮಿಸ್ಟರ್ ಪ್ರೈಮ್ ಮಿನಿಸ್ಟರ್. ಅದನ್ನ ನೀವು ಅರ್ಥ ಮಾಡಿಕೊಳ್ಳಬೇಕು ಎಂದರು.
ಇನ್ನೂ ಕೆಲವರು ಕರ್ನಾಟಕದವರು ಭಿಕ್ಷೆ ಬೇಡೋದಕ್ಕೆ ಹೋಗ್ತಿದಾರೆ ಅಂತಾರೆ. ಏನ್ ಭಿಕ್ಷೆ, ನಾವು ಕೊಟ್ಟ ಹಣ. ಒಂದು ಬಿಲ್ಲೆ ಅಲ್ಲ ಎರಡು ಬಿಲ್ಲೆ ಅಲ್ಲ. 4 ಲಕ್ಷ ಕೋಟಿ ಹಣ ಕೊಟ್ಟಿದ್ದೇವೆ ಸ್ವಾಮಿ. ಇದಿಷ್ಟೇ ತಗೋಳಿ ಅಂತಾ ಹೇಳೋಕೆ ನಾಚಿಕೆ ಬರೋದಿಲ್ವಾ? ನಮ ರಾಜ್ಯದ ಕೆಲ ಶಾಸಕರು ನಿಮ್ಮ ಸ್ವಾರ್ಥದ ಕಾರಣಕ್ಕೆ ಕೇಂದ್ರ ಬೆಂಬಲಿಸೋಕೆ ಹೊರಟಿದ್ದೀರಿ. ನಮ್ಮ ಸರ್ಕಾರ ಬಂದ ಮೇಲೆ ಕರ್ನಾಟಕಕ್ಕೆ ಏನು ಅನುದಾನ ಬಂದಿದೆ? ಕಾಂಗ್ರೆಸ್ ಸರ್ಕಾರ ಇರೋ ರಾಜ್ಯಗಳನ್ನ ಹತ್ತಿಕ್ಕಬೇಕು ಅಂತಿದೀರಾ. ಡಿಎಂಕೆ ಸರ್ಕಾರ ಇರೋ ತಮಿಳುನಾಡಿನಲ್ಲಿ ಅನ್ಯಾಯ ಮಾಡಿ ಏನಾದ್ರೂ ಮಾಡಿ ಜನಪ್ರಿಯತೆ ಕಡಿಮೆಗೊಳಿಸಬೇಕು ಅನ್ನೋ ಪ್ರಯತ್ನ ನಡೆದಿದೆ.
ಈ ರೀತಿ ಅನ್ಯಾಯ ಮಾಡಿದ್ರೆ ಫೆಡರಲ್ ವ್ಯವಸ್ಥೆಗೆ ಧಕ್ಕೆ ಕೊಡ್ತೀರಿ. ಕೇಂದ್ರ ಸರಕಾರ ಫೆಡರಲ್ ವ್ಯವಸ್ಥೆಯಲ್ಲಿ ವಿಶ್ವಾಸಾರ್ಹತೆ ಕುದುರಿಸೋ ಪ್ರಯತ್ನ ಮಾಡಬೇಕು. ಕಮರಿಸೋ ಪ್ರಯತ್ನ ಮಾಡ್ತಿದ್ದೀರಿ. ಅನ್ಯಾಯವನ್ನು ತಕ್ಷಣ ಸರಿಪಡಿಸದೇ ಹೋದ್ರೆ ಬಹಳಷ್ಟು ಗಂಡಾಂತರ ಎದುರಿಸಬೇಕಾಗತ್ತೆ ಎಚ್ಚರಿಕೆ ನೀಡಿದ್ದಾರೆ.