ಕರ್ನಾಟಕ ತಂಡ ವಿರುದ್ದ ಕ್ರೀಡಾ ಸ್ಪೂರ್ತಿ ಮರೆತ ಚೇತೇಶ್ವರ್..!! ಚೀಟರ್ ಅಂತ ಕರೆದ ಕ್ರಿಕೆಟ್ ಫ್ಯಾನ್ಸ್..!!
ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕರ್ನಾಟಕ ಹಾಗು ಸೌರಾಷ್ಟ್ರ ವಿರುದ್ದ ರಣಜಿ ಟ್ರೋಫಿ ಸೆಮಿಫೈನಲ್ ಮ್ಯಾಚ್ ನಡೆಯಿತು.. ಈ ಸಂದರ್ಭದಲ್ಲಿ ಸೌರಾಷ್ಟ್ರ ಪರ ಬ್ಯಾಟಿಂಗೆ ಇಳಿದ ಚೇತೇಶ್ವರ ಪೂಜಾರ ವಿರುದ್ದ ಸ್ಟೇಡಿಯಂ ನಲ್ಲಿದ್ದ ಅಭಿಮಾನಿಗಳು ಚೀಟರ್ ಅಂತ ಕೂಗೋಕೆ ಶುರು ಮಾಡಿದ್ರು.. ಹಾಗಿದ್ರೆ ಚೇತೇಶ್ವರ್ ಪೂಜಾರ ಮಾಡಿದ ಎಡವಟ್ಟೇನು ಗೊತ್ತಾ..? ಮುಂದೆ ಓದಿ..
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಪೂಜಾರ ಔಟಾಗಿದ್ದು ಗೊತ್ತಾಗಿದ್ದರೂ ಕ್ರೀಸ್ನಲ್ಲೇ ನಿಂತಿದ್ದರು. ಇನ್ನು ಎರಡನೇ ಇನ್ನಿಂಗ್ಸ್ನಲ್ಲೂ ಸಹ ಪೂಜಾರ ಔಟಾಗಿದ್ದರು ಏನು ಆಗಲಿಲ್ಲವೆಂಬಂತೆ ನಿಂತಿದ್ದು ಜಂಟಲ್ಮ್ಯಾನ್ ಗೇಮ್ಗೆ ಮೋಸ ಮಾಡಿದ್ದಾರೆ.
34 ರನ್ ಗಳಿಸಿದ್ದಾಗ ಔಟ್ ಆದ್ರು ಅಲ್ಲೆ ನಿಂತಿದ್ರು.. ಅಂಪೈರ್ ಔಟ್ ನೀಡದಿದ್ದದಕ್ಕೆ ವಿನಯ್ ಕುಮಾರ್ ವಿರೋಧ ವ್ಯಕ್ತ ಪಡೆಸಿದ್ರು.. ಇನ್ನು ಆನಂತರ ಉತ್ತಮ ಬ್ಯಾಟಿಂಗ್ ನಡೆಸಿದ ಪೂಜಾರ ಕರ್ನಾಟಕದ ಪೈನಲ್ ಕನಸಿಗೆ ಫುಲ್ ಸ್ಟಾಪ್ ಇಟ್ರು..