ರಾಮನಗರ ಕನಕಪುರದಲ್ಲಿ ಇಂದು ಆರ್‌ಎಸ್‌ಎಸ್ ರ‍್ಯಾಲಿಯನ್ನು ಹಮ್ಮಿಕೊಂಡಿದ್ದರೂ ಕಬ್ಬಾಳಮ್ಮ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಬಂದಪಟ್ಟಿ ಕೆಲವರನ್ನು ವಿರೋಧಿಸಿ ಈ ರ್ಯಾಲಿಯನ್ನು ಮಾಡಲಾಗಿದೆ ಆ ರ್ಯಾಲಿಯಲ್ಲಿ ಮಾತನಾಡಿದ್ದ ಆರೆಸ್ಸೆಸ್ ಮುಖಂಡ ಪ್ರಭಾಕರ್ ಅವರ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ ಕಲ್ಲಡ್ಕ ಪ್ರಭಾಕರ್ ಕನಕಪುರಕ್ಕೆ ಬಂದು ಭಾಷಣ ಮಾಡಿದ್ದಾರೆ. ಅವರು ಯಾರೆಂದು ನನಗೆ ಗೊತ್ತಿಲ್ಲ.
ಅವರ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಇರಬಹುದು. ನನಗಂತೂ ಗೊತ್ತಿಲ್ಲ ಎಂದು ತಳ್ಳಿಹಾಕಿದ್ದಾರೆ.ಕನಕಪುರ ಜನರಿಗೆ ಪ್ರಚೋದನೆಗೆ ಒಳಗಾಗದಂತೆ ಮನವಿ ಮಾಡಿದ್ದೇನೆ. ಬಂದವರು ಎಷ್ಟೇ ಕೂಗಾಡಿಕೊಳ್ಳಲಿ, ಟೀಕೆ ಮಾಡಲಿ ಯಾರೂ ತಿರುಗಿಸಿ ಹೇಳಬೇಡಿ ಎಂದು ಮನವಿ ಮಾಡಿದ್ದೇನೆ ಎಂದರು. ವಿರೋಧಿಗಳು ಏನೇ ಪಿತೂರಿ ಮಾಡಿದರೂ ಕನಕಪುರದ ಜನ ನನ್ನ ಜೊತೆ ಇದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ .