ಕಸ ತುಂಬುವ ಕವರ್ ಹೊದ್ದು ಮಲಗಿದ ಬಿಗ್ ಬಾಸ್ ಸ್ಪರ್ಧಿಗಳು!

Date:

ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ದಿನನಿತ್ಯ ಒಂದಲ್ಲ ಒಂದು ಟಾಸ್ಕ್ ಇರುತ್ತದೆ. ಲಕ್ಷುರಿ ಟಾಸ್ಕ್ ಗೆದ್ದರೆ ಮನೆಗೆ ಸಾಮಗ್ರಿಗಳು ಸಿಗುತ್ತವೆ. ಇನ್ನು ತಪ್ಪು ಮಾಡಿದರೆ ಅದಕ್ಕೆ ಶಿಕ್ಷೆ ಅನುಭವಿಸಲೇಬೇಕು. ಅಂತೆಯೇ ಜೀವನ ಒಮ್ಮೊಮ್ಮೆ ಖಾಲಿತನಕ್ಕೆ ದೂಡಿಬಿಡುತ್ತದೆ ಎಂಬ ಮಾತನ್ನು ಸ್ಪರ್ಧಿಗಳಿಗೆ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಬಿಗ್ ಬಾಸ್ ಮಾಡುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ನೀರಿಲ್ಲ, ಜಿಮ್ ಇಲ್ಲ, ಅಡುಗೆ ಸಾಮಗ್ರಿಯೂ ಇಲ್ಲ. ಇವೆಲ್ಲವು ಮತ್ತೆ ಬೇಕು ಎಂದಾದರೆ ಸ್ಪರ್ಧಿಗಳು ಟಾಸ್ಕ್ ಮೂಲಕ ಪಡೆದುಕೊಳ್ಳಬೇಕು. ಹೀಗಾಗಿ ಬಿಗ್ ಬಾಸ್ ಸ್ಪರ್ಧಿಗಳಿಗೆ ವಿಧ ವಿಧವಾದ ಟಾಸ್ಕ್ ನೀಡಿದ್ದಾರೆ. ಇದೇನು ಹೊಸತಲ್ಲ. ಈ ಹಿಂದಿನ ಸೀಸನ್‌ಗಳಲ್ಲಿಯೂ ಈ ರೀತಿ ಟಾಸ್ಕ್‌ಗಳು ಇದ್ದವು.

ಸ್ಪರ್ಧಿಗಳು ಅಡುಗೆ ಸಾಮಗ್ರಿಗಳು ಮೊದಲು ಬೇಕು ಎಂದು ಬಿಗ್ ಬಾಸ್ ಬಳಿ ಕೇಳಿದ್ದಾರೆ. ಅದಕ್ಕೆ ತಯಾರಿ ಮಾಡಿಕೊಂಡು ಆಟ ಆಡಲು ಸಜ್ಜಾಗಿದ್ದಾರೆ. ಇನ್ನು ರಾತ್ರಿ ಗಾರ್ಡನ್ ಏರಿಯಾದಲ್ಲಿ ಮಲಗಬೇಕು. ಸೊಳ್ಳೆ ಕಾಟ ಒಂದು ಕಡೆಯಾದರೆ ಇನ್ನೊಂದು ಕಡೆ ಬೆಡ್‌ಶೀಟ್ ಇಲ್ಲ, ಹಾಸಿಗೆ ಇಲ್ಲ. ಹೀಗಾಗಿ ನಿದ್ದೆ ಇಲ್ಲದೆ ಸ್ಪರ್ಧಿಗಳು ಒದ್ದಾಡಿದ್ದಾರೆ.

ಬೆಡ್‌ಶೀಟ್ ಇಲ್ಲದೆ ಕಸ ತುಂಬುವ ಪ್ಲಾಸ್ಟಿಕ್ ಕವರ್ ಹೊದ್ದುಕೊಂಡು ಸ್ಪರ್ಧಿಗಳು ನಿದ್ದೆ ಮಾಡಿದ್ದಾರೆ. ಇನ್ನೂ ಕೆಲವರು ಸಿಕ್ಕ ಸಿಕ್ಕ ಜಾಗದಲ್ಲಿ ನಿದ್ದೆ ಮಾಡಲು ಪ್ರಯತ್ನಪಟ್ಟಿದ್ದಾರೆ. ಅದರ ಜೊತೆ ಬಾಕ್ಸ್ ಒಳಗೆ ಹೋಗಿ ಕೂಡ ನಿದ್ದೆ ಮಾಡಲು ಯತ್ನಿಸಿದ್ದಾರೆ.

ಒಟ್ಟಿನಲ್ಲಿ ಇಂದಿನ ಎಪಿಸೋಡ್ ತುಂಬ ಮಜವಾಗಿದೆ. ಸ್ಪರ್ಧಿಗಳಿಗೆ ಜೀವನ ಒಮ್ಮೊಮ್ಮೆ ಖಾಲಿತನಕ್ಕೆ ದೂಡಿಬಿಡುತ್ತದೆ ಎಂಬ ಮಾತನ್ನು ಅರ್ಥ ಮಾಡಿಸುವಲ್ಲಿ ಬಿಗ್ ಬಾಸ್ ಯಶಸ್ವಿಯಾಗಿದ್ದಾರೆ. ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 8ರ ಆರಂಭವಾಗಿ 51 ದಿನಗಳು ಕಳೆದಿವೆ. 7 ವಾರವೂ ಎಲಿಮಿನೇಶನ್ ಪ್ರಕ್ರಿಯೆ ನಡೆದಿದೆ. 8ನೇ ವಾರ ಯಾರು ಬಿಗ್ ಬಾಸ್ ಮನೆಯಿಂದ ಹೊರ ಹೋಗಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...