No menu items!
11.1 C
Munich
Wednesday, April 29, 2026

ಸರಕಾರದಿಂದಲೇ ಕೋವಿಡ್ ಎರಡನೇ ಅಲೆ ಬಂದಿರೋದು ಎಂದ ಡಿಕೆಶಿ!!

Must read

ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ಮಂಗಳವಾರ ರಾಜ್ಯಪಾಲ ವಜೂಭಾಯಿ ವಾಲಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಆದರೆ ಯಾವ ಆಧಾರದಲ್ಲಿ ರಾಜ್ಯಪಾಲರು ಸಭೆ ಕರೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಮಂಗಳವಾರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಆಹ್ವಾನದ ಮೇರೆ ಅವರಿಗೆ ಗೌರವ ಕೊಟ್ಟು ನಮ್ಮ ಪಕ್ಷ ಸಭೆಯಲ್ಲಿ ಭಾಗಿಯಾಗುತ್ತಿದೆ. ಸರ್ಕಾರದ ಬಳಿ ಮಾಹಿತಿ ಪಡೆದುಕೊಳ್ಳಬಹುದು. ಸರ್ವ ಪಕ್ಷಗಳ ಸಭೆಗೆ ನಮ್ಮನ್ನು ಕರೆದಿದ್ದಾರೆ. ಆದರೆ, ಸಂವಿಧಾನದ ಯಾವ ಅಡಿಯಲ್ಲಿ ಕರೆದಿದ್ದಾರೆ ಎಂದು ಗೊತ್ತಿಲ್ಲ , ಕರೆಯಬಹುದಾ ಅಂತ ಗೊತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸಿಎಂ ಅವರು ಆಸ್ಪತ್ರೆಯಲ್ಲಿ ಇದ್ದಾರೆ, ರಾಜ್ಯಪಾಲರು ಚೇರ್ ಮಾಡುತ್ತಾರೆ ಎಂದು ನಮಗೆ ನೋಟಿಸ್ ಬಂದಿದೆ. ಆದರೆ ರಾಜ್ಯಪಾಲರು ಯಾವ ನಿಯಮದ ಅಡಿಯಲ್ಲಿ ಸಭೆ ಕರೆದಿದ್ದಾರೆ ಎಂದು ಗೊತ್ತಿಲ್ಲ. ಇದನ್ನು ಕಾನೂನು ಸಚಿವರು ಹೇಳಬೇಕು ಎಂದರು. ಕೊರೊನಾ ಮೊದಲನೇ ಅಲೆ ಚೀನಾದಿಂದ ಬಂತು ಅಂತಾರೆ..! ಆದರೆ, ಎರಡನೇ ಅಲೆ ಸರ್ಕಾರದಿಂದಲೇ ಬಂದಿದೆ ಎಂದು ಕಿಡಿಕಾರಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article