ವಿಂಡ್ಸರ್ ಮ್ಯಾನರ್ ನಲ್ಲಿ ಬಿ.ರಾಮಲಿಂಗ ರೆಡ್ಡಿ ಮತ್ತು ಅವರ ಶಾಸಕ ಪುತ್ರಿ ಸೌಮ್ಯಾ ರೆಡ್ಡಿ ಜೊತೆ ಸಂಧಾನ ಮಾತುಕತೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷ ತೊರೆಯಬೇಡಿ. ಕೊಟ್ಟಿರುವ ರಾಜೀನಾಮೆಯನ್ನು ಹಿಂಪಡೆಯುವಂತೆ ಕೆ.ಸಿ. ವೇಣುಗೋಪಾಲ್ ರಾಮಲಿಂಗ ರೆಡ್ಡಿ ಅವರಲ್ಲಿ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಪಕ್ಷದಲ್ಲಿ ಉಳಿಯಬೇಕಾದರೆ ಮೊದಲು ಪರಮೇಶ್ವರ್ ಅವರನ್ನು ಕೆಳಗಿಳಿಸಿ, ಬೆಂಗಳೂರು ಉಸ್ತುವಾರಿಯ ಜವಾಬ್ದಾರಿಯಿಂದ ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳಿ.ಅವರೇ ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣ. ಅವರಿಂದಾಗಿಯೇ ಶಾಸಕರು ರಾಜೀನಾಮೆ ನೀಡಿದ್ದಾರೆ. ಅವರನ್ನು ಕೆಳಗಿಳಿಸಿದರೆ ಎಲ್ಲವೂ ಸರಿಹೋಗುತ್ತದೆ ಎಂದು ಷರುತ್ತು ಹಾಕಿದ್ದಾರೆ ಎನ್ನಲಾಗಿದೆ