ಈ ಹಿಂದೆ ಅಜ್ಜಿಯೊಬ್ಬರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೋಡಲೇಬೇಕು ಎಂದು ಊರಿನ ಯುವಕರ ಬಳಿ ಹೇಳಿಕೊಳ್ಳುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಆ ಯುವಕರು ದರ್ಶನ್ ಅವರು ಮೈಸೂರಿನಲ್ಲಿಲ್ಲ ಬೆಂಗಳೂರಿನಲ್ಲಿ ಇದ್ದಾರೆ ಎಂದು ಎಷ್ಟೇ ಹೇಳಿದರೂ ಕೇಳದ ಆ ಅಜ್ಜಿ ನನ್ನದೊಂದು ಓಲೆಯಿದೆ ಅದನ್ನು ಅಡವಿಟ್ಟು ದುಡ್ಡು ತರುತ್ತೇನೆ ಬಾಡಿಗೆ ಕಾರು ಮಾಡಿಕೊಂಡು ಬೆಂಗಳೂರಿಗೆ ನನ್ನನ್ನು ಕರೆದುಕೊಂಡು ಹೋಗಿ ಎಂದು ಪಟ್ಟು ಹಿಡಿದಿದ್ದರು.
ಹೀಗೆ ಪಟ್ಟು ಹಿಡಿದಿದ್ದ ಮೈಸೂರು ಮೂಲದ ಅಜ್ಜಿಯನ್ನು ಇಂದು ದರ್ಶನ್ ಅವರು ತಮ್ಮ ಫಾರ್ಮ್ ಹೌಸ್ ಗೆ ಕರೆಸಿಕೊಂಡು ಭೇಟಿ ಮಾಡಿದ್ದಾರೆ. ಅವರ ಆರೋಗ್ಯ ವಿಚಾರಿಸಿದ ನಟ ದರ್ಶನ್ ಅವರು ಆ ಅಜ್ಜಿಯ ಆಸೆಯಂತೆ ಭೇಟಿ ಮಾಡಿ ಅವರ ಆಸೆಯನ್ನ ಪೂರೈಸಿದ್ದಾರೆ.
ಇನ್ನು ಹೀಗೆ ಮಾತನಾಡಿದ ಅಜ್ಜಿ ನಾನು ನಿನ್ನ ಚಿತ್ರವನ್ನು ಮಾತ್ರ ನೋಡುತ್ತೇನೆ ಬೇರೆ ಯಾರ ಚಿತ್ರವನ್ನು ನೋಡುವುದಿಲ್ಲ ಅಷ್ಟು ಇಷ್ಟ ನೀನು ನನಗೆ ಎಂದು ದರ್ಶನ್ ಅವರಿಗೆ ಹೇಳಿದರು. ಇದಕ್ಕೆ ಉತ್ತರಿಸಿದ ನಟ ದರ್ಶನ್ ಅವರು ಎಲ್ಲರ ಚಿತ್ರವನ್ನು ನೋಡಬೇಕು ಅಜ್ಜಿ , ಅವಾಗಲೇ ಎಲ್ಲರೂ ಬೆಳೆಯೋಕೆ ಸಾಧ್ಯ ಎಂದು ಅಜ್ಜಿಗೆ ಹೇಳಿದರು.. ಹೀಗೆ ಅಜ್ಜಿಯ ಆಸೆಯನ್ನು ಪೂರೈಸಿ ನಟ ದರ್ಶನ್ ಅವರು ಅವರನ್ನು ಕಳುಹಿಸಿಕೊಟ್ಟರು..