ಕಾರವಾರದಲ್ಲಿ ಅಪರೂಪದ ಆಮೆಯ ಕಳೇಬರ ಪತ್ತೆ

0
31

ಪಶ್ಚಿಮ ಕರಾವಳಿಯಲ್ಲಿ ಮೊದಲ ಬಾರಿಗೆ ಕಾರವಾರ ತಾಲೂಕಿನ ಮಾಜಾಳಿ ಕಡಲತೀರದಲ್ಲಿ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ‘ಹಾಕ್ಸ್‌ಬಿಲ್’ ಸಮುದ್ರ ಆಮೆಯ ಕಳೇಬರ ಪತ್ತೆಯಾಗಿದೆ.

ಆಗಸ್ಟ್ ತಿಂಗಳ ಆರಂಭದಲ್ಲಿ ಎರಡು ಹಸಿರು ಆಮೆಗಳು ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಬಂದು ಬಿದ್ದಿದ್ದವು. ಕಡಲಶಾಸ್ತ್ರಜ್ಞರು ಇದರಿಂದ ಗೊಂದಲಕ್ಕೊಳಗಾಗಿದ್ದರು. ಈ ನಡುವೆ ಅತ್ಯಂತ ಅಪರೂಪದ ‘ಹಾಕ್ಸ್ ಬಿಲ್’ ಆಮೆ ತೀರದಲ್ಲಿ ಬಂದು ಬಿದ್ದಿದೆ.

 

“ಕಡಲ ಜೀವಶಾಸ್ತ್ರ ವಿಭಾಗದ ನಮ್ಮ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಪಂಚಮಿ ಈ ಆಮೆಯನ್ನು ಕಾರವಾರದ ಮಾಜಾಳಿಯ ತೀಳ್ಮಾತಿ ಕಡಲತೀರದಲ್ಲಿ ಕಂಡಿದ್ದಾರೆ. ಇಲ್ಲಿ ಪತ್ತೆಯಾದ ಮೊದಲ ‘ಹಾಕ್ಸ್ ಬಿಲ್’ ಆಮೆ ಇದಾಗಿದ್ದು, ನಿಜಕ್ಕೂ ಇದರ ಅಧ್ಯಯನದ ಅಗತ್ಯವಿದೆ,” ಎಂದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಸಾಗರ ಜೀವಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಕುಮಾರ ಹರಗಿ ಅಭಿಪ್ರಾಯಪಟ್ಟಿದ್ದಾರೆ.

 

 

LEAVE A REPLY

Please enter your comment!
Please enter your name here