ಬೆಂಗಳೂರಿಗೆ ಬಂದಿಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
ಭದ್ರಾವತಿ ಕಾರ್ಯಕ್ರಮ ಮುಗಿಸಿ ಹಿಂದಿರುಗಿದ ಅಮಿತ್ ಶಾ ಗೆ ಹೆಚ್ ಎಎಲ್ ವಿಮಾನ ನಿಲ್ದಾಣದ ಬಳಿ ಅದ್ದೂರಿ ಸ್ವಾಗತ ನೀಡಲಾಗಿದ್ದು ಆದರೆ ವಿಳಂಬವಾದ ಕಾರಣ ಸ್ವಾಗತ ಕಾರ್ಯಕ್ರಮದ ಅವಧಿ ಕಡಿತ ಮಾಡಲಾಯಿತು ಸನ್ಮಾನ ಸ್ವೀಕಾರಕ್ಕೆ ಮೊದಲೇ ವೇದಿಕೆಯಿಂದ ಕೆಳಗಿಳಿದು ಹೊರಟ ಅಮಿತ್ ಶಾ ಗೆ ವೇದಿಕೆಯ ಕೆಳಭಾಗದಲ್ಲೇ ಹಸು ಕರುವಿನ ಪ್ರತಿಮೆ ನೀಡಿ ಗೌರವಿಸಿದ ಅರವಿಂದ ಲಿಂಬಾವಳಿಕೇವಲ ಎರಡೇ ನಿಮಿಷದಲ್ಲಿ ಸ್ವಾಗತ ಕಾರ್ಯಕ್ರಮ ಮುಕ್ತಾಯ,
ಕಾರ್ಯಕರ್ತರತ್ತ ಕೈ ಬೀಸಿ ನಡೆದ ಅಮಿತ್ ಶಾ ಹೊರಟು ಕಾರ್ಯಕರ್ತರನ್ನು ನಿರಾಶೆಗೊಳಿಸಿದ್ದಾರೆ ಎನ್ನಲಾಗುತ್ತಿದೆ,ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಭಾವಚಿತ್ರವಿದ್ದ ಪ್ಲಕಾರ್ಡ್ ಪ್ರದರ್ಶನಕ್ಕೆ ಸಚಿವ ಅರವಿಂದ ಲಿಂಬಾವಳಿ ವಿರೋಧ.ಹೆಚ್ ಎಎಲ್ ಬಳಿ ಅಮಿತ್ ಷಾ ಸ್ವಾಗತ ಕಾರ್ಯಕ್ರಮದ ವೇದಿಕೆ ಬಳಿ ಘಟನೆ.ಬಿಜೆಪಿ ಬಾವುಟವನ್ನಲ್ಲದೆ ಬೇರೆ ಯಾರದ್ದು ಪ್ಲಕಾರ್ಡ್ ಪ್ರದರ್ಶಿಸದಂತೆ ಅರವಿಂದ ಲಿಂಬಾವಳಿ ಸೂಚನೆ ನೀಡಿದರು .ಪ್ಲಕಾರ್ಡ್ ಗಳನ್ನು ಸಂಗ್ರಹಿಸಿಕೊಂಡು ಬರುವಂತೆ ಕಾರ್ಯಕರ್ತರಿಗೆ ಆದೇಶಿಸಿದ ಲಿಂಬಾವಳಿ ಆದರೆ ಸಮಯದ ಅಭಾವ ಇದ್ದರಿಂದ ಕಾರ್ಯಕ್ರಮದಿಂದ ಹೊರಟ ಅಮಿತ್ ಶಾ ಕಾರ್ಯಕರ್ತರಿಗೆ ಹಾಗೆ ಕೈ ಬೀಸಿ ಹೊರಟಿದ್ದು ಕಾರ್ಯಕರ್ತರಿಗೆ ನಿರಾಸೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ.