ಕಾಲ್ತುಳಿತದ ಪ್ರಕರಣ: ರೇವತಿ ಕುಟುಂಬಕ್ಕೆ 2 ಕೋಟಿ ಪರಿಹಾರ ಘೋಷಣೆ

Date:

ಕಾಲ್ತುಳಿತದ ಪ್ರಕರಣ: ರೇವತಿ ಕುಟುಂಬಕ್ಕೆ 2 ಕೋಟಿ ಪರಿಹಾರ ಘೋಷಣೆ

ಹೈದರಾಬಾದ್: ಪುಷ್ಪ 2 ಚಿತ್ರದ ಪ್ರೀಮಿಯರ್ ಶೋ ನೋಡಲು ಅಲ್ಲು ಅರ್ಜುನ್ ಬಂದಾಗ, ನೆಚ್ಚಿನ ಹೀರೋನನ್ನು ನೋಡುವ ಭರದಲ್ಲಿ ನೂಕು ನುಗ್ಗಲು ಉಂಟಾಗಿ ಜನರ ಕಾಲ್ತುಳಿತಕ್ಕೆ ಸಿಲುಕಿ ಮಹಿಳೆಯೊಬ್ಬರು ಉಸಿರು ಚೆಲ್ಲಿದ್ದು ನಿಮಗೆ ಗೊತ್ತೆ ಇದೆ. ಇದೀಗ ರೇವತಿ ಕುಟುಂಬಕ್ಕೆ 2 ಕೋಟಿ ರೂಪಾಯಿ ಪರಿಹಾರ ನೀಡುತ್ತಿದ್ದಾರೆ ಎಂದು ನಿರ್ಮಾಪಕ ಅಲ್ಲು ಅರವಿಂದ್ ಹೇಳಿದ್ದಾರೆ. ಶ್ರೀತೇಜ್ ಸದ್ಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲು ಅರ್ಜುನ್ ಪರವಾಗಿ 1 ಕೋಟಿ ರೂ., ಪುಷ್ಪ 2 ನಿರ್ಮಾಪಕರು ಮತ್ತು ನಿರ್ದೇಶಕ ಸುಕುಮಾರ್ 50 ಲಕ್ಷ ರೂ. ಪರಿಹಾರ ನೀಡ್ತಿದ್ದಾರೆ.
ಅಲ್ಲು ಅರವಿಂದ್ ಹಾಗೂ ಎಫ್‌ಡಿಸಿ ಅಧ್ಯಕ್ಷ ದಿಲ್ ರಾಜು ಮತ್ತು ಪುಷ್ಪ 2 ನಿರ್ಮಾಪಕ ರವಿಶಂಕರ್ ಅವರೊಂದಿಗೆ ಕಿಮ್ಸ್ ಆಸ್ಪತ್ರೆಗೆ ತೆರಳಿದ್ದರು. ಶ್ರೀತೇಜ್ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು. ಬಳಿಕ ಬಾಲಕನ ತಂದೆ ಭಾಸ್ಕರ್ ಬಳಿ ಮಾತನಾಡಿ ಧೈರ್ಯ ತುಂಬಿದರು. ನಂತರ ಅಲ್ಲು ಅರವಿಂದ್ ಸುದ್ದಿಗೋಷ್ಠಿ ನಡೆಸಿ ಪರಿಹಾರದಲ್ಲಿ ಬಗ್ಗೆ ತಿಳಿಸಿದ್ದಾರೆ. ಶ್ರೀತೇಜ್ ಕುಟುಂಬಕ್ಕೆ 2 ಕೋಟಿ ರೂ. ಈಗಾಗಲೇ ಮೈತ್ರಿ ಮೂವೀಸ್ ಭಾರೀ ಪ್ರಮಾಣದ ಆರ್ಥಿಕ ನೆರವು ನೀಡಿದೆ.

Share post:

Subscribe

spot_imgspot_img

Popular

More like this
Related

ನೈಋತ್ಯ ರೈಲ್ವೆಗೆ ₹7,748 ಕೋಟಿ ಅನುದಾನ: 2009–14ಕ್ಕೆ ಹೋಲಿಸಿದರೆ 9 ಪಟ್ಟು ಹೆಚ್ಚಳ – ಅಶ್ವಿನಿ ವೈಷ್ಣವ್

ನೈಋತ್ಯ ರೈಲ್ವೆಗೆ ₹7,748 ಕೋಟಿ ಅನುದಾನ: 2009–14ಕ್ಕೆ ಹೋಲಿಸಿದರೆ 9 ಪಟ್ಟು...

ತಾಂತ್ರಿಕ ದೋಷ: ಲಂಡನ್–ಬೆಂಗಳೂರು ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಸುರಕ್ಷಿತ ಲ್ಯಾಂಡ್

ತಾಂತ್ರಿಕ ದೋಷ: ಲಂಡನ್–ಬೆಂಗಳೂರು ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಸುರಕ್ಷಿತ...

ಊಟ ಮಾಡಿದ ತಕ್ಷಣ ಚಹಾ ಕುಡಿಯುತ್ತೀರಾ? ಇದರಿಂದಾಗುವ ಅಪಾಯಗಳು ಇಲ್ಲಿವೆ

ಊಟ ಮಾಡಿದ ತಕ್ಷಣ ಚಹಾ ಕುಡಿಯುತ್ತೀರಾ? ಇದರಿಂದಾಗುವ ಅಪಾಯಗಳು ಇಲ್ಲಿವೆ ನಮ್ಮಲ್ಲಿ ಬಹುತೇಕ...

ದ್ವೇಷ ಭಾಷಣ ಮಸೂದೆ ಜಾರಿಗೆ ಅಡ್ಡಿಯಾಗಲೆಂದೇ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ:  ಸಚಿವ ಪರಮೇಶ್ವರ್ ಆರೋಪ

ದ್ವೇಷ ಭಾಷಣ ಮಸೂದೆ ಜಾರಿಗೆ ಅಡ್ಡಿಯಾಗಲೆಂದೇ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ:  ಸಚಿವ...