ಕಿಚ್ಚ ನ ಅಭಿಮಾನಿಗಳಿಗೆ ಕಿಕ್ ಏರಿಸೋ ನ್ಯೂಸ್ ಕೊಟ್ಟ ಪೈಲ್ವಾನ್..!!
ಕಿಚ್ಚ ಸುದೀಪ್ ತನ್ನ ಅಭಿಮಾನಿಗಳಿಗೆ ಖುಷಿಯಾಗೋ ವಿಚಾರವೊಂದನ್ನ ಶೇರ್ ಮಾಡಿದ್ದಾರೆ… ಅದು ತಮ್ಮ ಮುಂದಿನ ಚಿತ್ರ ಪೈಲ್ವಾನ್ ಬಗ್ಗೆ.. ಈಗಾಗ್ಲೇ ಕನ್ನಡದ ಮತ್ತೊಂದು ಹೈ ಬಜೆಟ್ ಸಿನಿಮಾವಾಗಿ ಸಿದ್ದವಾಗ್ತಿರೋ ಪೈಲ್ವಾನ್ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗೋಕೆ ತಯಾರಿ ನಡೆಸಿದೆ.. ಹಲವು ಭಾಷೆಗಳಲ್ಲಿ ಪೈಲ್ವಾನ್ ಡಬ್ ಆಗಲ್ಲಿದ್ದು, ಕನ್ನಡದ ಮತ್ತೊಂದು ಸಿನಿಮಾ ಬಿಗ್ ರಿಲೀಸ್ ಕಾಣೋ ಮುನ್ಸೂಚನೆಯನ್ನ ನೀಡುತ್ತಿದೆ..
ಸದ್ಯ ಪೈಲ್ವಾನ್ ಶೂಟಿಂಗ್ ನಲ್ಲಿ ಬ್ಯೂಸಿಯಾಗಿರು ಕಿಚ್ಚನ ಈ ಸಿನಿಮಾದ ಟೀಸರ್ ಲಾಂಚ್ ಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ.. ಈ ವಿಚಾರವನ್ನ ತನ್ನ ಟ್ವಿಟರ್ ನಲ್ಲಿ ಸುದೀಪ್ ಶೇರ್ ಮಾಡಿಕೊಂಡಿದ್ದು ಇದೇ 15 ಕ್ಕೆ 4.45 ಸುಮಾರಿಗೆ ಪೈಲ್ವಾನ್ ಟೀಸರ್ ಅನ್ನ ಲಾಂಚ್ ಮಾಡೋದಾಗಿ ಹೇಳಿದ್ದಾರೆ. ಕೃಷ್ಣ ನಿರ್ದೇಶನದ ಈ ಸಿನಿಮಾಗೆ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ..