ಸಲ್ಮಾನ್-ಸುದೀಪ್ ಅವರ ಜೊತೆಗೆ ಕನ್ನಡಿಗ ಪ್ರಭುದೇವ ಅವರ ನಿರ್ದೇಶನ. ಹೀಗೆ ಸಾಕಷ್ಟು ಕಾರಣಗಳಿಂದ ‘ದಬಾಂಗ್ 3’ ಮೇಲೆ ನಿರೀಕ್ಷೆ ಹುಟ್ಟಿದೆ. ಇಂತಹ ಈ ಸಿನಿಮಾ ಇಂದು ವಿಶ್ವದಾದ್ಯಂತ ತೆರೆ ಕಂಡಿದೆ. ಹಾಗು ಕನ್ನಡದಲ್ಲು ಸಿನಿಮಾ ತೆರೆ ಕಂಡಿದ್ದು ಪ್ರೇಕ್ಷಕ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ . ರಾಜ್ಯದಾದ್ಯಂತ ಕಿಚ್ಚನ ಅಭಿಮಾನಿಗಳು ಸಿನೆಮಾ ನೋಡಲು ಚಿತ್ರ ಮಂದಿಕ್ಕೆ ಬಂದು ಜೈಕಾರ ಹಾಕುತ್ತಿದ್ದಾರೆ.
ಮೈನ್ ಥಿಯೇಟರ್ ತ್ರಿವೇಣಿ ಯಲ್ಲಿ ಕಿಚ್ಚನ ಅಭಿಮಾನಿಗಳು ಚಿತ್ರ ವಿಕ್ಷಿಸಿ ಅವರ ಅಭಿನಯದ ಬಗ್ಗೆ ಹೋಗಳಿದ್ದಾರೆ ಹಾಗೆ ಚಿತ್ರದಲ್ಲಿ ಸುದೀಪ್ ಹಾಕಿರುವ ಕಾಸ್ಟುಮ್ ಹಾಗು ಅವರಹಾಗು ಸಲ್ಮಾನ್ ನಡುವಿನ ಫೈಟಿಂಗ್ ನೋಡಿ ಪ್ರೇಷಕ ಕುಶ್ ಆಗಿದ್ದಾನೆ. ಸಲ್ಮಾನ್ ಖಾನ್ ಹಾಗು ಸುದೀಪ್ ಕಾಂಬಿನೇಷನ್ ನಲ್ಲಿ ಪ್ರಭುದೇವ ನಿರ್ದೇಶನದಲ್ಲಿ ಅದ್ಬುತ ವಾಗಿ ಸಿನಿಮಾ ಮೂಡಿಬಂದಿದೆ .ಹಾಗು ಸಾಂಗ್ ಕೂಡ ಅಧ್ಬುತವಾಗಿದೆ ಸಂಜಿತ್ ಹೆಗ್ಡೆ ಹಾಡಿರುವ ಹಾಡು ಕೂಡ ಅಧ್ಬುತ ವಾಗಿ ಬಂದಿದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ.