ಕಿಡ್ನಾಪ್ ಆಗಿದ್ದ ಯೋಧ ಬಿಡುಗಡೆ

1
2643

ರಾಯ್‍ಪುರ: ನಕ್ಸಲರಿಂದ ಕಿಡ್ನಾಪ್ ಆಗಿದ್ದ ಕೋಬ್ರಾ ಯುನಿಟ್‍ನ ಯೋಧ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರು ಇಂದು ಬಿಡುಗಡೆಯಾಗಿದ್ದಾರೆ.

ಕಳೆದ ವಾರ ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದಾಳಿಗೆ 22 ಯೋಧರು ಹುತಾತ್ಮರಾಗಿ, ಹಲವು ಯೋಧರು ನಾಪತ್ತೆಯಾಗಿದ್ದರು. ಬಳಿಕ ಕೋಬ್ರಾ ಯುನಿಟ್‍ನ ಯೋಧರಾದ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ನಕ್ಸಲರು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು ಇಂದು ಅವರನ್ನು ಬಿಡುಗಡೆ ಮಾಡಿದ್ದಾರೆ.

ಟರ್ರೆಮ್ ಅರಣ್ಯ ಪ್ರದೇಶದಲ್ಲಿ ನಕ್ಸಲರು ಬಿಡುಬಿಟ್ಟಿರುವ ಕುರಿತು ಮಾಹಿತಿ ಕಲೆಹಾಕಿದ್ದ ನಕ್ಸಲ್ ನಿಗ್ರಹ ಪಡೆ ಸಿಆರ್‍ಪಿಎಫ್ ನೊಂದಿಗೆ ಜಂಟಿ ಕಾರ್ಯಾಚರಣೆಗೆ ನಡೆಸಿತ್ತು. ಸಿಆರ್‍ಪಿಎಫ್‍ನ ಕೋಬ್ರಾ ತಂಡ ಮತ್ತು ಜಿಲ್ಲಾ ಮೀಸಲು ಸಶಸ್ತ್ರಪಡೆ ಜಂಟಿ ಕಾರ್ಯಾಚರಣೆಗಿಳಿದು, ನಕ್ಸಲರ ಅಡಗುತಾಣದ ಮೇಲೆ ದಾಳಿ ಮಾಡಿತ್ತು. ಬಳಿಕ ಈ ದಾಳಿಯಲ್ಲಿ 22 ಮಂದಿ ಯೋಧರು ಮೃತಪಟ್ಟು ಹಲವು ಯೋಧರು ನಾಪತ್ತೆಯಾಗಿದ್ದರು.

ಭದ್ರತಾಪಡೆಗಳು ಹಾಗೂ ನಕ್ಸಲರ ನಡುವೆ ಒಟ್ಟು 4 ಗಂಟೆಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ 22 ಜನ ಯೋಧರು ಮೃತಪಟ್ಟು ಉಳಿದ ಯೋಧರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಕ್ಸಲ್ ಸಂಘಟನೆಯೊಂದು ಕೋಬ್ರಾ ಯುನಿಟ್‍ನ ಯೋಧರಾದ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ಒತ್ತೆಯಾಳಾಗಿರಿಸಿಕೊಂಡಿತ್ತು. ಇಂದು ಅವರನ್ನು ನಕ್ಸಲ್ ಸಂಘಟನೆ ಬಿಡುಗಡೆ ಮಾಡಿ ಕಳಿಸಿಕೊಟ್ಟಿದೆ.

ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ನಕ್ಸಲ್ ಸಂಘಟನೆ ಬಿಡುಗಡೆ ಮಾಡುತ್ತಿದ್ದಂತೆ ಅವರ ಪತ್ನಿ ಮಿನು ಸ್ಥಳೀಯ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿ, ನನ್ನ ಜೀವನದಲ್ಲಿ ತುಂಬಾ ಸಂತೋಷದ ದಿನವಿದು. ಅವರು ಮರಳಿ ಬಂದಿರುವುದನ್ನು ನಾನು ಯಾವತ್ತು ಸ್ಮರಿಸುತ್ತೇನೆ ಎಂದಿದ್ದಾರೆ.

 

1 COMMENT

LEAVE A REPLY

Please enter your comment!
Please enter your name here