RCB ಫ್ಯಾನ್ಸ್ ಹಾಡಿಗೆ ಹುಚ್ಚೆದ್ದು ಕುಣೀತೀರಿ!

1
46

ಬೆಂಗಳೂರು: 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಚಾಲನೆಗೊಳ್ಳುವುದರಲ್ಲಿದೆ. ವಿಶ್ವದೆಲ್ಲೆಡೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಶೇಷ ಆ್ಯಂಥಮ್ ಬಿಡುಗಡೆಯಾಗಿದೆ. ಅಭಿಮಾನಿಗಳೇ ರಚಿಸಿದ ವಿಶೇಷ ಗೀತೆಯಿದು.

ಐಪಿಎಲ್ ಇತಿಹಾಸದಲ್ಲಿ ಒಂದು ಸಾರಿಯೂ ಟ್ರೋಫಿ ಗೆಲ್ಲದ ತಂಡಗಳ ಸಾಲಿನಲ್ಲಿ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೆ. ಈ ಸೀಸನ್‌ನಲ್ಲಿ ಆರ್‌ಸಿಬಿ ಚೊಚ್ಚಲ ಕಪ್‌ ಗೆಲ್ಲಲಿ ಎಂಬ ಆಶಯದಡಿಯಲ್ಲಿ ಆರ್‌ಸಿಬಿ ಅಭಿಮಾನಿಗಳು ವಿಶೇಷ ಗೀತೆ ಬಿಡುಗಡೆಗೊಳಿಸಿದ್ದಾರೆ. ಹರೀಶ್ ಅರಸು, ಅಲ್ವಿನ್, ಶ್ರೀಧರ್ ನಾರಾಯಣ್ ಸೇರಿ ಈ ವಿಡಿಯೋ ರೂಪಿಸಿದ್ದಾರೆ.

ಪ್ರಮೋದ್ ಮರವಂತೆ ಸಾಹಿತ್ಯಕ್ಕೆ ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ ನೀಡಿದ್ದಾರೆ. ಚೇತನ್ ನಾಯ್ಕ್ ಅವರ ಸೊಗಸಾದ ಕಂಠದಲ್ಲಿ ಆ್ಯಂಥಮ್ ಮೂಡಿಬಂದಿದೆ. ಗೀತೆಯುದ್ದಕ್ಕೂ ಆರ್‌ಸಿಬಿ ತಂಡ, ಅಭಿಮಾನಿಗಳಿಗೆ ಹುರುಪು ತುಂಬುವಂಥ ಸಾಲುಗಳು ಮೆರಗು ನೀಡಿವೆ. ‘ಅದು ಏನೇ ಬರಲಿ ಈ ಸರ್ತಿ ಮಾತ್ರ ಕಪ್ಪು ನಮ್ಮದೇ’ ಎಂಬ ಸಾಲು ಹೆಚ್ಚು ಸೆಳೆಯುತ್ತಿದೆ.

ಈ ಬಾರಿ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾದಾಡಲಿವೆ.

ಏಪ್ರಿಲ್ 9ರಂದು ಈ ಪಂದ್ಯ ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ 7.30 PMಗೆ ಆರಂಭಗೊಳ್ಳಲಿದೆ. ಈ ಸಾರಿಯಾದರೂ ವಿರಾಟ್ ಕೊಹ್ಲಿ ಪಡೆ ಕಪ್‌ ಗೆಲ್ಲಲಿ ಎಂದು ಹಾರೈಸೋಣ..

1 COMMENT

LEAVE A REPLY

Please enter your comment!
Please enter your name here