ಕುಮಾರಸ್ವಾಮಿ ಶನಿವಾರವೇ ಕುಟುಂಬ ಸದಸ್ಯರೊಂದಿಗೆ ಗೋವಾಕ್ಕೆ ತೆರಳಿದ್ದರು. ನಾಳೆ ಸಂಜೆ ವೇಳೆಗೆ ಬೆಂಗಳೂರಿಗೆ ವಾಪಸ್ಸಾಗುವ ಕಾರ್ಯಕ್ರಮವಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.ತಮ್ಮ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ತಮ್ಮ ಪತ್ನಿ ಅನಿತಾಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಕೇಕ್ ಕತ್ತರಿಸಿ ಇಂದು ಕುಮಾರಸ್ವಾಮಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಹಾಗೂ ವಿಶ್ರಾಂತಿ ಪಡೆಯಲು ಗೋವಾಗೆ ಕುಮಾರಸ್ವಾಮಿಯವರು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ .
ಉಪ ಚುನಾವಣೆಯಲ್ಲಿ ತಾವು ನಂಬಲಾರದಂತಹ ಫಲಿತಾಂಶ ಬಂದಿದ್ದರಿಂದ ಸ್ವಲ್ಪ ಮನನೊಂದಿದ್ದರು ಕುಮಾರಸ್ವಾಮಿ ಎಂದು ಹೇಳಲಾಗಿತ್ತು ಇದೀಗ ತಮ್ಮ ಹುಟ್ಟು ಹಬ್ಬ ಬಂದಿರುವುದರಿಂದ ಅವರು ಅದನ್ನೆಲ್ಲ ಮರೆತು ಆಚರಣೆ ಮಾಡಲು ಹಾಗೂ ವಿಶ್ರಾಂತಿ ಪಡೆಯಲು ಗೋವಾಗೆ ತೆರಳಿದ್ದಾರೆ . ಚಿತ್ರರಂಗ ಸೇರಿದಂತೆ ರಾಜಕೀಯ ವಲಯಗಳಿಂದಲೂ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಗಣ್ಯಾತಿಗಣ್ಯರು ಕೋರುತ್ತಿದ್ದಾರೆ .