ಕುಡುಕರ ಗಮನಕ್ಕೆ: ಚಳಿಗಾಲದಲ್ಲಿ ಎಣ್ಣೆ ಕುಡಿಬಾರ್ದಂತೆ! ಯಾಕೆ ಗೊತ್ತಾ!?

Date:

ಕುಡುಕರ ಗಮನಕ್ಕೆ: ಚಳಿಗಾಲದಲ್ಲಿ ಎಣ್ಣೆ ಕುಡಿಬಾರ್ದಂತೆ! ಯಾಕೆ ಗೊತ್ತಾ!?

ಮಳೆಗಾಲ ಕಳೆದು ಚಳಿಗಾಲದ ಚಳಿ ಈಗ ಎಲ್ಲರನ್ನು ಕಾಡಲು ಆರಂಭಿಸಿದೆ. ದಿನೇ-ದಿನೇ ಎಲ್ಲೆಡೆ ಚಳಿಯ ವಾತಾವರಣ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಮನೆಯ ಒಳಾಂಗಣ ಮತ್ತು ಹೊರಾಂಗಣ ವಿನ್ಯಾಸದಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ಕೊಂಚ ಚಳಿ ಕಡಿಮೆ ಆಗುತ್ತದೆ. ಸಾಮಾನ್ಯವಾಗಿ ಚಳಿಗಾಲ ಬಂದ ತಕ್ಷಣ ಅನೇಕ ಮಂದಿ ಶೀತ, ನೆಗಡಿ, ಕೆಮ್ಮು, ಗಂಟಲು ನೋವು ಹೀಗೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ.

ಚಳಿಯಾದ ವಾತಾವರಣ ಅನೇಕ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುವುದರಿಂದ ಹೆಚ್ಚಿನ ಕಾಳಜಿ ವಹಿಸುವುದು ಅವಶ್ಯವಾಗಿದೆ. ಆದರೆ ಕೆಲವರು ಚಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಆಲ್ಕೋಹಾಲ್ ಸೇವನೆ ಮಾಡಲು ಆರಂಭಿಸುತ್ತಾರೆ. ಇದು ಯಾವ ರೀತಿಯಲ್ಲಿ ಅಪಾಯ ತರಬಹುದು ಎಂಬುದು ಕೂಡ ತಿಳಿದಿರುವುದಿಲ್ಲ. ವೈದ್ಯರು ಹೇಳುವ ಪ್ರಕಾರ ಈ ರೀತಿಯ ಅಭ್ಯಾಸ ಒಳ್ಳೆಯದಲ್ಲ. ಅದಲ್ಲದೆ ಇದೊಂದು ತಪ್ಪು ಕಲ್ಪನೆ ಎನ್ನುತ್ತಾರೆ. ಸಾಮಾನ್ಯವಾಗಿ ಜನರು ಮದ್ಯ ಸೇವನೆ ಮಾಡುವುದರಿಂದ ಕೊರೆಯುವ ಚಳಿಯಿಂದ ಬಿಡುಗಡೆ ಪಡೆಯಬಹುದು ಎಂದು ತಿಳಿದುಕೊಳ್ಳುತ್ತಾರೆ. ಆದರೆ ಇದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ಯೋಚಿಸುವುದಿಲ್ಲ. ಹಾಗಾದರೆ ಚಳಿಗಾಲದಲ್ಲಿ ಆಲ್ಕೋಹಾಲ್ ಸೇವನೆ ಮಾಡುವುದರಿಂದ ಉಂಟಾಗುವ ಸಮಸ್ಯೆಗಳೇನು? ಇಲ್ಲಿದೆ ಮಾಹಿತಿ.

ಅನೇಕರ ಮನೆಗಳಲ್ಲಿ ಸಂಜೆ ಶೀತದ ವಾತಾವರಣ ಆರಂಭವಾಗುತ್ತಿದ್ದಂತೆ ಮದ್ಯ ಸೇವನೆ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಅದರಲ್ಲಿಯೂ ಶೀತದಿಂದ ಪಾರಾಗಲು ಮಿತಿಮೀರಿ ಕುಡಿಯುತ್ತಾರೆ. ಈ ರೀತಿ ಅಭ್ಯಾಸ ಅನೇಕ ಸಮಸ್ಯೆಗಳಿಗೆ ಆಹ್ವಾನ ನೀಡಿದಂತಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ. ಅದರಲ್ಲಿಯೂ ಇದರಿಂದ ಉಸಿರಾಟಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಹೆಚ್ಚಾಗುವ ಅಪಾಯವಿರುತ್ತದೆ. ನಿಮಗೆ ಹೆಚ್ಚಿನ ಜ್ವರ, ಉಸಿರಾಟದ ತೊಂದರೆ, ನೀಲಿ ಚರ್ಮ ಅಥವಾ ತುಟಿಗಳಿಂದ ಅಥವಾ ಕಫ ಹೊರಬರುವಾಗ ರಕ್ತ ಬಂದರೆ, ನೀವು ತಕ್ಷಣ ಆಸ್ಪತ್ರೆಗೆ ಹೋಗಬೇಕು ಎಂದು ವೈದ್ಯರು ಸೂಚಿಸುತ್ತಾರೆ

ಆಲ್ಕೋಹಾಲ್ ನಿಮ್ಮ ರಕ್ತನಾಳಗಳನ್ನು ಹಿಗ್ಗಿಸುತ್ತದೆ, ಇದು ಮೊದಲಿಗೆ ನಿಮಗೆ ಬೆಚ್ಚಗಿನ ಅನುಭವವನ್ನು ನೀಡಿದರೂ ಕೂಡ ದೇಹಕ್ಕೆ ಒಳ್ಳೆಯದಲ್ಲ.

ಆಲ್ಕೋಹಾಲ್ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ, ಇದು ಅಪಾಯಕಾರಿ ನಡವಳಿಕೆಗೆ ಕಾರಣವಾಗಬಹುದು.

-ಆಲ್ಕೋಹಾಲ್ ನಿಮ್ಮ ಹೃದಯ ಬಡಿತ ಮತ್ತು ಅರಿಥ್ಮಿಯಾ ಅಪಾಯವನ್ನು ಹೆಚ್ಚಿಸುತ್ತದೆ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...