ಮುಖ್ಯಮಂತ್ರಿ ಕುಮಾರಸ್ವಾಮಿ 5 ವರ್ಷ ಸಿಎಂ ಆಗಿರಬೇಕು ಅಷ್ಟೆ ಅದಕ್ಕೋಸ್ಕರ ಜೆಡಿಎಸ್ ನ ಶಾಸಕರು ಮತ್ತು ನಾಯಕರೂ ಎಂಥಾ ತ್ಯಾಗಕ್ಕೂ ಸಿದ್ಧರಾಗಿ ನಿಂತಿದ್ದೇವೆ ಎಂದು ಸಾರಾ ಮಹೇಶ್ ಹೇಳಿಕೆಯನ್ನು ನೀಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಸಚಿವ ಸಂಪುಟದ ವಿಸ್ತರಣೆ ಅಥವಾ ಪುನರ್ ರಚನೆ ಬಗ್ಗೆ ನಾನೂ ತಲೆ ಕೆಡಿಸಿಕೊಂಡಿಲ್ಲ. ಯಾರು ಮಂತ್ರಿ ಆಗ್ತಾರೋ ಯಾರು ಅಧಿಕಾರಲ್ಲಿ ಇರ್ತಾರೋ ಅನ್ನೋ ಯೋಚನೆ ನನಗಿಲ್ಲ ಇಲ್ಲ ಆದ್ರೆ ರೈತರು ಉಳಿಯಬೇಕು ಅವರ ಕಷ್ಟಗಳಿಗೆ ಪರಿಹಾರ ದೊರಕಬೇಕು ಹೀಗಾಗಿ ನಮ್ಮ ನಾಯಕ ಕುಮಾರಸ್ವಾಮಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಸಹ ಅದಕ್ಕೆ ನಮ್ಮ ಬೆಂಬಲ ಇದ್ದೇ ಇರುತ್ತದೆ ಇದಕ್ಕಾಗಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸಲು ನಾನು ಸೇರಿದಂತೆ ಜೆಡಿಎಸ್ ನ ಎಲ್ಲಾ ನಾಯಕರೂ ತರಹದ ತ್ಯಾಗಕ್ಕಾದರೂ ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.