ಕುಂದಗೋಳ ಕ್ಷೇತ್ರದ ಇಂಗಳಗಿಯಲ್ಲಿ ಇಂದು ಬಹಿರಂಗ ಸಮಾರಂಭದಲ್ಲಿ ಮಾತನಾಡುವ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಕುಂದಗೋಳ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿ ಹೊತ್ತುಕೊಂಡಿರುವ ಸಚಿವ ಡಿ.ಕೆ. ಶಿವಕುಮಾರ್ ಕ್ಷೇತ್ರದಲ್ಲಿ ಬಿಜೆಪಿ ಮತದಾರರು ಮತ್ತು ಕಾಂಗ್ರೆಸ್ ಮತದಾರರು ಎಂದು ಪಟ್ಟಿ ಮಾಡಿಲ್ಲ.
ಎಲ್ಲ ಮತದಾರರ ಬಳಿಯೂ ಮತಯಾಚನೆ ಮಾಡುತ್ತೇವೆ ಎಂದು ಹೇಳಿ ಮಾಜಿ ಸಚಿವ ದಿವಂಗತ ಸಿ.ಎಸ್. ಶಿವಳ್ಳಿ ಅವರನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ.
ಬಿಜೆಪಿಯವರು ದಿವಂಗತ ಶಿವಳ್ಳಿ ಅವರನ್ನು ಕೆಟ್ಟವರು ಅಂತ ಎಲ್ಲೂ ಹೇಳಿಲ್ಲ ಆದರೆ ಸಮ್ಮಿಶ್ರ ಸರ್ಕಾರದ ಕಿರುಕುಳದಿಂದ ಅವರು ಸತ್ತಿದ್ದಾರೆ ಎಂದು ಶ್ರೀರಾಮುಲು ಹೇಳುವ ಮೂಲಕ ಜನರನ್ನು ನಮ್ಮ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ರು.
ಶ್ರೀರಾಮುಲು ಅವರ ಈ ಹೇಳಿಕೆ ಬಗ್ಗೆ ವಿ.ಎಸ್. ಉಗ್ರಪ್ಪ ಅವರು ಸದ್ಯದಲ್ಲೇ ಚುನಾವಣಾ ಆಯೋಗದ ಅಧಿಕಾರಿಗೆ ದೂರನ್ನು ನೀಡಲಿದ್ದಾರೆ ಸತ್ಯಾಂಶ ಏನು ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದ್ದಾರೆ.
ಒಂದು ವೇಳೆ ಶ್ರೀರಾಮುಲು ಅವರು ಸ್ಪಷ್ಟನೆ ನೀಡುವುದಾದರೆ ಪೊಲೀಸರಿಗೆ ನೀಡಲಿ ಅದು ಬಿಟ್ಟು ಈ ರೀತಿ ಮಾತನಾಡಬಾರದು ಎಂದು ಕಿಡಿಕಾರಿದ್ದಾರೆ.
ಶ್ರೀರಾಮುಲು ಅವರು ಈ ಹಿಂದೆಯೂ ಮುಖ್ಯಮಂತ್ರಿ ಕೊಲೆ ಸಂಚು ಮಾಡಿದ್ದಾರೆ ಎಂದು ಆರೋಪಿಸಿದರು ಆದರೆ ಆ ರೀತಿಯ ಆರೋಪಗಳನ್ನು ಕೇಳಿ ಮುಖ್ಯಮಂತ್ರಿ ಕುಮಾರಸ್ವಾಮಿ ಸುಮ್ಮನೆ ಇರಬಹುದು ಆದರೆ ನಾವು ಸುಮ್ಮನೆ ಇರಲು ಆಗುವುದಿಲ್ಲ ಎಂದು ಹೇಳುವ ಮೂಲಕ ಶ್ರೀರಾಮುಲು ಅವರಿಗೆ ಎಚ್ಚರಿಕೆ ನೀಡಿದ್ದಾರೆ.