ಕುರಿ,ಕೋಳಿಗಿಂತ ‘ಇಲಿ’ ಮಾಂಸವೇ ಇಲ್ಲಿ ಸಖತ್ ಫೇಮಸ್.. ಕೆಜಿಗೆ ಎಷ್ಟು ಗೊತ್ತಾ..??
ಹೌದು, ಇಲಿ ಕಾಟಕ್ಕೆ ರೈತರು ಹೈರಾಣಾಗಿದ್ದಾರೆ. ತಮ್ಮ ಬೆಳೆಯನ್ನ ಉಳಿಸಿಕೊಳ್ಳಲು ಇಲಿಗನ್ನ ಹಿಡಿಯುವುದು ಸಾಮಾನ್ಯ.. ಆದರೆ ಇದೇ ಇಲಿಗಳನ್ನ ಅಸ್ಸಾಂ ರಾಜ್ಯದ ಕುಮಾರಿಕಟ ಪ್ರದೇಶದಲ್ಲಿ ವ್ಯಾಪಾರಿಗಳು ಕೊಂಡುಕೊಳ್ಳುತ್ತಾರೆ.. ಜೊತೆಗೆ ತಾವೇ ಇಲಿ ಬೇಟೆಗೆ ಇಳಿಯುತ್ತಾರೆ.. ಯಾಕಂದ್ರೆ ಈ ಪ್ರದೇಶದಲ್ಲಿ ಕುರಿ, ಕೋಳಿ ಮಾಂಸಕ್ಕಿಂತ ಇಲಿ ಮಾಂಸಕ್ಕೆ ಬೇಡಿಕೆ ಹೆಚ್ಚಂತೆ..
ಹೀಗಾಗೆ ಇಲಿಗಳನ್ನ ತಮ್ಮದೇ ಶೈಲಿಗಳನ್ನ ಬಳಸಿ ಹಿಡಿದು ತಂದು ಚರ್ಮ ಸುಲಿದು ಸಂತೆಯಲ್ಲಿ ಮಾರುತ್ತಾರೆ.. ಒಂದು ಕೆಜಿಗೆ 200 ರೂಗಳ ವರೆಗು ಬೆಲೆ ಇದೆ.. ಹೀಗಾಗೆ ಇಲ್ಲಿ ಬುಡುಕಟ್ಟು ಜನಾಂಗ ಸೇರಿದಂತೆ ಹಲವರು ಇದನ್ನ ಕಸುಬಾಗಿಸಿಕೊಂಡಿದ್ದು, ತಮ್ಮ ಜೀವನ ನಿರ್ವಹಣೆಗಾಗಿ ಇದನ್ನ ವ್ಯಾಪಾರವಾಗಿಸಿಕೊಂಡಿದ್ದಾರೆ.. ಒಂದೊಂದು ಬಾರಿ ಸಿಗುವ ಒಂದೊಂದು ಇಲಿಗಳು ಒಂದು ಕೆಜಿಗಿಂತಲು ಹೆಚ್ಚಿನ ತೂಕವನ್ನ ಹೊಂದಿರುತವಂತೆ..