ಕೂದಲಿನ ಆರೈಕೆ: ತಲೆ ಸ್ನಾನದ ವೇಳೆ ಈ ತಪ್ಪುಗಳಿಂದ ದೂರವಿರಿ
ಕೂದಲು ಮಹಿಳೆಯರ ಸೌಂದರ್ಯಕ್ಕೆ ಬಹುಮುಖ್ಯ. ಉದ್ದ, ದಪ್ಪ ಹಾಗೂ ಮೃದುವಾದ ಕೂದಲುಗಾಗಿ ಅನೇಕರು ಎಣ್ಣೆ, ಶಾಂಪೂ, ಕಂಡೀಷನರ್ ಮುಂತಾದವುಗಳನ್ನು ಬಳಸುತ್ತಾರೆ. ಆದರೆ, ಸರಿಯಾದ ಆರೈಕೆಯಲ್ಲದೇ ಮಾಡಲ್ಪಡುವ ಕೆಲವು ಸಾಮಾನ್ಯ ತಪ್ಪುಗಳು ಕೂದಲು ಉದುರುವಂತಾಗಿಸಬಹುದು. ತಲೆ ಸ್ನಾನ ಮಾಡುವಾಗ ಈ ಕೆಳಗಿನ ಸೂಕ್ಷ್ಮ ವಿಚಾರಗಳ ಕಡೆ ಗಮನ ಹರಿಸಿದರೆ, ಕೂದಲಿನ ಆರೋಗ್ಯವನ್ನು ಸುಧಾರಿಸಬಹುದು:
ತಣ್ಣೀರಿನಲ್ಲಿ ತಲೆ ತೊಳೆಯಿರಿ
ಬಿಸಿ ನೀರಿನಿಂದ ತಲೆ ತೊಳೆಯುವುದು ಕೂದಲಿಗೆ ಹಾನಿಕರ. ಇದು ತಲೆಯಲ್ಲಿನ ನೈಸರ್ಗಿಕ ಎಣ್ಣೆಯ ಅಂಶವನ್ನು ತೆಗೆದುಹಾಕುತ್ತದೆ. ತಣ್ಣನೆಯ ನೀರಿನಿಂದ ತೊಳೆಯುವುದರಿಂದ ಕೂದಲು ಉದುರುವ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ತಣಕಿದ ಕೂದಲು ಮೃದುಗೊಳ್ಳುತ್ತದೆ.
ಪ್ರತಿದಿನ ತಲೆ ತೊಳೆಯಬೇಡಿ
ಅನೇಕರು ಪ್ರತಿದಿನ ತಲೆ ತೊಳೆಯುವುದು ಉತ್ತಮವೆಂದು ನಂಬುತ್ತಾರೆ. ಆದರೆ, ಇದರಿಂದ ತಲೆಯ ಚರ್ಮದ ನೈಸರ್ಗಿಕ ತೈಲ ಕಳೆದುಹೋಗಿ ಕೂದಲು ಒಣಗುತ್ತದೆ. ವಾರಕ್ಕೆ 2–3 ಬಾರಿ ತಲೆ ಸ್ನಾನ ಮಾಡುವ ಅಭ್ಯಾಸವೇ ಆರೋಗ್ಯಕರ.
ಕಂಡೀಷನರ್ ಬಳಕೆ ತಲೆ ಚರ್ಮಕ್ಕೆ ಅಲ್ಲ
ಕಂಡೀಷನರ್ ಅನ್ನು ಕೇವಲ ಕೂದಲುಮೇಲೆ ಮಾತ್ರ ಹಚ್ಚಬೇಕು. ತಲೆಯ ಮೇಲೆ ಅಥವಾ ನೆತ್ತಿಗೆ ಹಚ್ಚುವುದು ರಂಧ್ರಗಳನ್ನು ಮುಚ್ಚಿ ಕೂದಲು ಉದುರುವಂತೆ ಮಾಡುತ್ತದೆ. ಸ್ನಾನದ ಕೊನೆಗೆ, ಸ್ನಾನಗೃಹದಲ್ಲಿದ್ದಾಗಲೇ 6–7 ನಿಮಿಷ ಕಂಡೀಷನರ್ ಹಾಕಿ ಬಳಿಕ ತಣ್ಣೀರಿ ನೀರಿನಿಂದ ತೊಳೆಯುವುದು ಸೂಕ್ತ.
ನೇರವಾಗಿ ಶಾಂಪೂ ಹಾಕಬೇಡಿ
ಶಾಂಪೂ ನೇರವಾಗಿ ತಲೆಗೆ ಹಚ್ಚುವ ಬದಲು, ನೀರಿನಲ್ಲಿ ಕರಗಿಸಿ ಕೈಯಲ್ಲಿ ನೊರೆ ಮಾಡಿಕೊಳ್ಳಿ. ನಂತರ ಮಾತ್ರ ತಲೆಗೆ ಹಚ್ಚಿ ತೊಳೆಯುವುದು ಉತ್ತಮ. ಶಾಂಪೂ ಚೆನ್ನಾಗಿ ತೊಳೆಯದೇ ಇದ್ದರೆ ತಲೆಯ ಚರ್ಮದಲ್ಲಿ ತೊಂದರೆಗಳು ಉಂಟಾಗಬಹುದು.