ಕೆಆರ್ ಪುರಂ ಮಾರ್ಗದ 5994 ಕೋಟಿ ಯೋಜನೆಯ ಮೆಟ್ರೋ ಮಾರ್ಗಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್..

0
264

ಕೆಆರ್ ಪುರಂ ಮಾರ್ಗದ 5994 ಕೋಟಿ ಯೋಜನೆಯ ಮೆಟ್ರೋ ಮಾರ್ಗಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್..

ಮೆಟ್ರೋ ಬಂದ ಬಳಿಕ ಇದರಲ್ಲಿ ಸಂಚರಿಸುವ ಬೆಂಗಳೂರಿನಲ್ಲಿ ಜನ ಸಾಮಾನ್ಯರು ಸಮಯ ಹಾಗು ಟ್ರಾಫಿಕ್ ಕಿರಿಕಿರಿಯಿಂದ ನಿರಾಳರಾಗಿದ್ದಾರೆ.. ಈ ನಡುವೆ ಮೆಟ್ರೋ ಫೇಸ್ 2ಎ ನ ಅಡಿ ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆಆರ್ ಪುರಂ ಗೆ ಔಟರ್ ರಿಂಗ್ ರೋಡ್ ಮೂಲಕ ಸಂಚರಿಸುವ ಮೆಟ್ರೋಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ..

ಎಲ್ಲ ಅಂದುಕೊಂಡಂತೆ ಆದ್ರೆ ಈ ಯೋಜನೆಯು 2023ರ ಡಿಸಂಬರ್ ಗೆ ಕೊನೆಗಳ್ಳುವ ನಿರೀಕ್ಷೆಯಿದೆ.. ಒಟ್ಟು 5994.90 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ ಎಂದು ಅಂದಾಜಿಸಲಾಗಿದೆ.. ಮಾರ್ಚ್ 2020 ರ ವೇಳೆಗೆ ಯೋಜನೆಯ ಭೂ ಸ್ವಾಧೀನ ಹಾಗು ಇನ್ನುಳಿದ ಪೂರ್ವ ತಯಾರಿ ಚಟುವಟಿಕೆಗಳು ಅಂತ್ಯವಾಗಲಿದೆ

ಸದ್ಯ ಈ ಮಾರ್ಗದಲ್ಲಿ ಸರ್ಕಾರಕ್ಕಿಂತ ಖಾಸಗಿ ಜಾಗಗಳು ಹೆಚ್ಚಿದ್ದು ಹೀಗಾಗೆ ಭೂಮಿಯನ್ನ ಖರೀದಿಸಲು ಹೆಚ್ಚಿನ ಹಣವನ್ನ ವ್ಯಯಮಾಡಬೇಕಿದೆ.. ಸದ್ಯ ರಾಜ್ಯ ಸರ್ಕಾರದಿಂದ ಯೋಜನೆಗೆ ಹಸಿರು ನಿಶಾನೆ ದೊರೆತಿದ್ದು, ಕೇಂದ್ರದ ಅನುಮತಿಯನ್ನ ಪಡೆದು ಯೋಜನೆಗೆ ಆದಷ್ಟು ಬೇಗಾ ಚಾಲನೆ ನೀಡಲು ಬಿಎಂಆರ್ಸಿಎಲ್ ಸಿದ್ದವಾಗಿದೆ..

LEAVE A REPLY

Please enter your comment!
Please enter your name here