ಕಳೆದ ವರ್ಷ ಕೆಜಿಎಫ್ ಮೊದಲನೇ ಭಾಗ ತೆರೆ ಕಂಡು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿ ಇಡೀ ಭಾರತ ಚಿತ್ರರಂಗವೇ ಕನ್ನಡ ಚಲನಚಿತ್ರ ರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು. ಕೆಜಿಎಫ್ ಚಿತ್ರ ಎಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು ಎಂಬುದನ್ನು ನಿಮಗೆ ಹೆಚ್ಚೇನು ಹೇಳಬೇಕಾಗಿಲ್ಲ ಏಕೆಂದರೆ ಪ್ರತಿಯೊಬ್ಬರಿಗೂ ಸಹ ಕೆಜಿಎಫ್ ನ ಹವಾದ ಬಗ್ಗೆ ತಿಳಿದಿದೆ. ಇನ್ನು ಇದಾದ ಬಳಿಕ ಇದೀಗ ಎರಡನೇ ಭಾಗದ ಚಿತ್ರೀಕರಣ ಆರಂಭವಾಗಬೇಕಿದ್ದು ಈ ಚಿತ್ರೀಕರಣಕ್ಕೆ ವಿಘ್ನದ ಮೇಲೆ ವಿಘ್ನ ಎದುರಾಗುತ್ತಿದೆ.
ಹೌದು ಇತ್ತೀಚೆಗಷ್ಟೇ ಕೆಜಿಎಫ್ ಚಿತ್ರದ ಚಿತ್ರೀಕರಣ ನಿಲ್ಲಿಸುವಂತೆ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು ಆದರೆ ಈ ಅರ್ಜಿಯನ್ನು ತಿರಸ್ಕಾರ ಮಾಡಿದ ಬೆನ್ನಲ್ಲೇ ಇದೀಗ ಮತ್ತೊಬ್ಬ ಮಹಿಳೆ ಕೆಜಿಎಫ್ ಚಿತ್ರದ ವಿರುದ್ಧ ದೂರನ್ನು ನೀಡಿದ್ದು ಇದು ನನ್ನ ಮಗನ ಕಥೆಯನ್ನು ಹೋಲುವಂತಿದೆ ನನ್ನ ಮಗನ ಜೀವನಾಧಾರಿತ ಕತೆಯೇ ಕೆಜಿಎಫ್ ಎಂದು ಎಲ್ಲರೂ ಶಾಕ್ ಆಗುವಂತಹ ರೀತಿ ಹೇಳಿಕೆ ನೀಡಿ ಕೇಸ್ ಹಾಕಿದ್ದಾರೆ. ಹೌದು ಈ ಮಹಿಳೆ ಹೇಳುವ ಪ್ರಕಾರ ಆಕೆಯ ಮಗ ತಂಗಂ ಎಂಬ ರೌಡಿ ತೊಂಬತ್ತರ ದಶಕದಲ್ಲಿ ಕೆಜಿಎಫ್ ನಲ್ಲಿ ಇದ್ದಾಗ ನಡೆದ ಘಟನೆಯೇ ಕೆಜಿಎಫ್ ಚಿತ್ರ ಎಂದು ಆರೋಪ ಮಾಡುತ್ತಿದ್ದಾರೆ. ಇನ್ನು ಈ ಮಹಿಳೆ ಮಾಡುತ್ತಿರುವ ಆರೋಪ ಎಷ್ಟರ ಮಟ್ಟಿಗೆ ನಿಜ ಎಂಬುದು ವಿಚಾರಣೆಯ ನಂತರವೇ ತಿಳಿಯಲಿದೆ.