ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಬಹುಭಾಷೆಯಲ್ಲಿ ಚಿತ್ರ ನಿರ್ಮಿಸುವ ಧೈರ್ಯ ಇಲ್ಲ , ಕನ್ನಡ ಚಿತ್ರಗಳನ್ನು ಬೇರೆ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡುವಷ್ಟು ಕೆಪಾಸಿಟಿ ಕನ್ನಡ ಚಿತ್ರರಂಗಕ್ಕೆ ಇಲ್ಲ ಎಂಬ ಮಾತು ಈ ಹಿಂದೆ ದೊಡ್ಡ ಪ್ರಮಾಣದಲ್ಲಿ ಇತ್ತು. ಆದರೆ ಈ ಎಲ್ಲ ಮಾತನ್ನು ಹುಸಿಗೊಳಿಸಿದ್ದು ಹೊಂಬಾಳೆ ಬ್ಯಾನರ್ ನಿರ್ಮಾಣದ ಕೆಜಿಎಫ್ ಚಿತ್ರ.
ಹೌದು ಕೆಜಿಎಫ್ ಚಿತ್ರ ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಿಗೂ ಸಹ ಡಬ್ಬಿಂಗ್ ಆಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದು ಕನ್ನಡ ಚಿತ್ರಗಳು ಸಹ ಪ್ಯಾನ್ ಇಂಡಿಯಾ ಬಿಡುಗಡೆ ಆಗಿ ಸದ್ದು ಮಾಡುವ ಕೆಪಾಸಿಟಿ ಹೊಂದಿದೆ ಎಂಬುದನ್ನು ಸಾಬೀತು ಪಡಿಸಿತು. ಇದರ ಬೆನ್ನಲ್ಲೇ ಇದೀಗ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ ಸಹ ಪ್ಯಾನ್ ಇಂಡಿಯಾ ಬಿಡುಗಡೆಯಾಗಿ ಸಖತ್ ಸದ್ದು ಮಾಡುತ್ತಿದೆ.
ಇದಾದ ಬಳಿಕ ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ ಚಿತ್ರದ ಸಹ ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದ್ದು ಈಗಾಗಲೇ ದೊಡ್ಡ ಮಠದ ಹೈಕ್ ರಿಕೆಟ್ ಮಾಡಿದೆ. ಇನ್ನು ಈ ಚಿತ್ರಗಳ ಬಳಿಕ ಶಿವಣ್ಣ ಅಭಿನಯದ ಭಜರಂಗಿ2 ಚಿತ್ರ ಸಹ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು ಒಟ್ಟು ಐದು ಭಾಷೆಯಲ್ಲಿ ಚಿತ್ರ ಬರಲಿದೆ ಎಂಬ ಮಾಹಿತಿ ಇದೆ. ಹೌದು ಒಟ್ಟು ಐದು ಭಾಷೆಗಳಲ್ಲಿ ಭಜರಂಗಿ2 ಚಿತ್ರ ನಿರ್ಮಾಣವಾಗಲಿದ್ದು ಶಿವಣ್ಣ ಪಾಲಿನ ಮೊದಲ ಪ್ಯಾನ್ ಇಂಡಿಯಾ ರಿಲೀಸ್ ಚಿತ್ರ ಇದಾಗಲಿದೆ. ಸೆಪ್ಟೆಂಬರ್ 9 ರಿಂದ ಭಜರಂಗಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ