ಕೆಜಿಎಫ್ ಹೊಗಳಿ ಬೆಂಗಳೂರು ಪೊಲೀಸರ ವಿವಾದ
ಕೆಜಿಎಫ್ ಸಿನಿಮಾ ಚಿನ್ನದ ಗಣಿ ಧೂಳಿನಲ್ಲಿ ಮಿಂದು ಎದ್ದಿದೆ.. ಹೊಡೆದಾಟ ಸೇರಿದಂತೆ ರಕ್ತದಲ್ಲಿ ಮಿಂದೇಳುವ ದೃಶ್ಯಗಳು ಚಿತ್ರದಲ್ಲಿವೆ.. ಇಂತಹದೊಂದು ಮಾಸ್ ಸಿನಿಮಾ ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲು ಹೆಸರು ಮಾಡಿದೆ.. ಹೀಗಾಗೆ ಕನ್ನಡದ ಸಿನಿಮಾ ಒಂದು ಮೊದಲ ಬಾರಿಗೆ ಈ ಪರಿ ಹೆಸರು ಮಾಡಿದ್ದಕ್ಕೆ, ಬೆಂಗಳೂರು ನಗರ ಪೊಲೀಸರ ಅಧಿಕೃತ ಟ್ವೀಟರ್ ಖಾತೆಯಲ್ಲಿ ಚಿತ್ರದ ಬಗ್ಗೆ ಒಂದನ್ನ ಹಾಕಲಾಗಿತ್ತು…
‘ನಮ್ಮ ಭಾಷೆಯ ಸಿನಿಮಾವೊಂದು ಕನ್ನಡದ ಗಡಿ ದಾಟಿ ಜಗತ್ತಿನೆಲ್ಲೆಡೆ ಜನಮನ್ನಣೆ ಪಡೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ. ಕನ್ನಡ ಚಿತ್ರ ಜಗತ್ತಿನ ತಾಂತ್ರಕತೆಯ ತಾಕತ್ತುನ್ನು ಜಗತ್ತಿಗೆ ತೋರಿಸಿದ ಕೆಜಿಎಫ್ #ನಮ್ಮ ಭಾಷೆ #ನಮ್ಮ ಹೆಮ್ಮೆ‘.. ಹೀಗೆಂದು ಹಾಕಲಾದ ಪೋಸ್ಟ್ ಗೆ ಆನಂತರ ಹಲವರು ತೀವ್ರ ಆಕ್ಷೇಪವನ್ನ ವ್ಯಕ್ತ ಪಡೆಸಿದ್ರು..
ರೌಡಿಸಂ ಚಿತ್ರವನ್ನ ಪೊಲೀಸರೆ ಹೊಗಳುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ರು.. ಇಂತಹದೊಂದು ವಿವಾದದ ಬೆನ್ನಲ್ಲೇ ಹಾಕಲಾಗಿದ್ದ ಪೋಸ್ಟನ್ನ ಪೊಲೀಸರು ಡಿಲೀಟ್ ಮಾಡಿದ್ದಾರೆ..